ಕಿರುಸೇತುವೆಗೆ ಕಾರು ಡಿಕ್ಕಿ: ನಾಲ್ವರು ಸಾವು

0
22

ಕೊಪ್ಪಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಕಿರು ಸೇತುವೆಯ ಪಕ್ಕದ ಗೋಡೆಗೆ ಮದ್ಯಾಹ್ನದ ವೇಳೆಯೇ ವೇಗವಾಗಿ ಬರುತ್ತಿದ್ದ ಕಾರು ಗುದ್ದಿದ್ದು, ಕಾರಿನಲ್ಲಿದ್ದ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳ ಜಿಲ್ಲೆಯ ಕೂಕುನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದೆ.
ಕಿರು ಸೇತುವೆಯ ಗೋಡೆಗೆ ಗುದ್ದಿದ ಕಾರು ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು ಚಾಲಕ ಸೇರಿ ಇಬ್ಬರು ಪುರುಷರು ಸೇರಿದಂತೆ ಸ್ಥಳದಲ್ಲಿಯೇ ನಾಲ್ವರೂ ಕೂಡ ಸಾವನ್ನಪ್ಪಿದ್ದಾರೆ. ಈ ಮೃತರನ್ನು ತೆಲಂಗಾಣ ರಾಜ್ಯದವರೆಂದು ಗುರುತಿಸಲಾಗಿದೆ. ಕೂಕುನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಆದರೆ, ಕಾರಿಗೆ ತೆಲಂಗಾಣದ ರಿಜಿಸ್ಟ್ರೇಷನ್‌ ಇದ್ದು ಮೃತರಾದರವರ ಹೆಸರು, ವಿಳಾಸ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ.

Previous articleಕಾಂಗ್ರೆಸ್ ಸದಸ್ಯರ ಧರಣಿ: ಸಂಧಾನ ಯಶಸ್ವಿ
Next articleಯುಕೆ ಪ್ರಧಾನಿ ಸುನಕ್ ಕುಟುಂಬ ಗೋವಾದಲ್ಲಿ