ಕಾಶ್ಮೀರದ ಮುಖ್ಯಮಂತ್ರಿಯೊಂದಿಗೆ ಸಂತೋಷ ಲಾಡ್: ಕನ್ನಡಿಗರ ರಕ್ಷಣೆಗೆ ಶ್ರಮ

0
20

ಶ್ರೀನಗರ: ನಿನ್ನೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮೃತದೇಹಗಳ ವಾಪಸಾತಿಗೆ ಮುನ್ನ ಉಗ್ರರ ದಾಳಿಯಲ್ಲಿ ಸಂತ್ರಸ್ತರಾದವರ ರಕ್ಷಣೆಗೆ ಕರ್ನಾಟಕದಿಂದ ಧಾವಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು. ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜತೆಗೆ ಮಾತನಾಡಿ ರಕ್ಷಣಾ ಕಾರ್ಯದ ಬಗ್ಗೆ ವಿವರಿಸಿದರು. ಉಗ್ರರ ದಾಳಿಯಲ್ಲಿ ಮೃತರಾದವರ ಪಾರ್ಥಿವ ಶರೀರವನ್ನು ಶ್ರೀನಗರದಲ್ಲಿ ಇರಿಸಲಾಗಿದ್ದು, ಈ ವೇಳೆ ಸಚಿವ ಲಾಡ್ ಮೃತದೇಹಗಳಿಗೆ ನಮನ ಸಲ್ಲಿಸಿದರು. ಬೆಳಗ್ಗಿನಿಂದಲೇ ಲಾಡ್ ಘಟನಾ ಸ್ಥಳಕ್ಕೆ ತೆರಳಿ ಮೃತದೇಹ ಗುರುತಿಸಲು ಸಂಬಂಧಿಕರಿಗೆ ನೆರವಾದರು. ಕರ್ನಾಟಕ ಸರ್ಕಾರವು ಈ ದಾಳಿಯಿಂದ ಬಾಧಿತರಾದ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯವನ್ನು ಒದಗಿಸುವ ಭರವಸೆ ನೀಡಿದೆ. ಸಚಿವ ಲಾಡ್ ಅವರ ನೇತೃತ್ವದ ತಂಡವು ಕನ್ನಡಿಗರ ಸುರಕ್ಷತೆ ಮತ್ತು ವಾಪಸಾತಿಗೆ ಸಹಕಾರ ನೀಡುತ್ತಿದೆ.

Previous articleಪಹಲ್ಗಾಮ್ ದಾಳಿ: ಉಗ್ರರಿಗೆ ತಕ್ಕ ಉತ್ತರ ನೀಡಿ: ಕೇಂದ್ರ ಸರ್ಕಾರಕ್ಕೆ VHP ಆಗ್ರಹ
Next articleಪಹಲ್ಗಾಮ್ ದಾಳಿ: ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ