ಕಾಳಿ ನದಿಯಲ್ಲಿ ಮುಳುಗಿ ಆರು ಮಂದಿ ಸಾವು

0
21


ಕಾರವಾರ: ಪ್ರವಾಸಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ಆರು ಮಂದಿ ಕಾಳಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಭಾನುವಾರ ನಡೆದಿದೆ.
ಮೃತಪಟ್ಟವರು ಹುಬ್ಬಳ್ಳಿ ಮೂಲದ ನಜೀರ ಅಹ್ಮದ್ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್ (6), ರೇಷಾ ಉನ್ನಿಸಾ (38), ಇಫ್ರಾ‌ಅಹ್ಮದ್ (15), ಅಬೀದ್ ಅಹ್ಮದ್ (12) ಎಂದು ತಿಳಿದುಬಂದಿದೆ. ಒಟ್ಟು ಎಂಟು ಮಂದಿ ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಆಗಮಿಸಿದ್ದರು. ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಮಕ್ಕಳು ಸೇರಿ ಉಳಿದ ಆರು ಮಂದಿ ಕಾಳಿ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಕಾಲು ಜಾರಿ ನದಿಯಲ್ಲಿ ಮುಳುಗಿದ್ದು ನಾಲ್ವರ ಮೃತದೇಹ ಪತ್ತೆಯಾಗಿದೆ. ಇನ್ನು ಇಬ್ಬರಿಗಾಗಿ ಹುಡುಕಾಟ ನಡೆಸಲಾಗಿದೆ.
ಸದ್ಯ ಮೃತದೇಹಗಳನ್ನು ದಾಂಡೇಲಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Previous articleಬಿಜೆಪಿ ಬಟನ್ ಎಕೆ 47 ಇದ್ದಂತೆ; ಅದನ್ನು ಒತ್ತಿದರೆ ಹಿಂದೂಗಳು ಸುರಕ್ಷಿತ
Next articleಮೋದಿ ಸುಳ್ಳುಗಳಲ್ಲೇ ಹತ್ತು ವರ್ಷ ಕಳೆದರು