ಹುಲಿಗಿ(ಕೊಪ್ಪಳ): ಹನುಮಮಾಲಾಧಾರಿಯೊಬ್ಬರು ಕಾಲುವೆಯಲ್ಲಿ ಸ್ನಾತ ಮಾಡುವಾಗ ಕೊಚ್ಚಿಹೋದ ಘಟನೆ ತಾಲ್ಲೂಕಿನ ಅಗಳಕೇರಾ ಗ್ರಾಮದಲ್ಲಿ ನಡೆದಿದೆ.
ಕೊಚ್ಚಿಹೋದ ಹನುಮಮಾಲಾಧಾರಿಯನ್ನು ತಾಲ್ಲೂಕಿನ ಅಗಳಕೇರಾ ಗ್ರಾಮದ ಯಮನೂರಪ್ಪ ಚಿಲಕಮುಖಿ(೧೮) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಸ್ನಾನ ಮಾಡಲು ಅಗಳಕೇರಾ ಗ್ರಾಮದ ಕಾಲುವೆಯಲ್ಲಿ ಮೂರು ಜನ ಹನುಮಮಾಲಾಧಾರಿಗಳು ತೆರಳಿದ್ದರು. ಮುಳುಗುತ್ತಿದ್ದ ಮೂವರ ಪೈಕಿ ಇಬ್ಬರನ್ನು ದಾರಿಯಲ್ಲಿ ಹೋಗುತ್ತಿದ್ದವರು ರಕ್ಷಿಸಿದ್ದು, ಇನ್ನೋರ್ವ ಯಮನೂರಪ್ಪ ಕಾಲುವೆಯಲ್ಲಿ ಕೊಚ್ಚಿಹೋಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶುಕ್ರವಾರ ಶೋಧಕಾರ್ಯ ನಡೆಸಿದ್ದಾರೆ. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.