ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು

0
17

ಕೊಪ್ಪಳ: ಬೇವಿನಗಿಡದ ತಪ್ಪಲು ತರಲು ತೆರಳಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಪಕ್ಕದ ಬಾವಿಯಲ್ಲಿ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಲೇಬಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೃತನನ್ನು ಲೇಬಗೇರಿ ಗ್ರಾಮದ ವಿರುಪಣ್ಣ ನಂದ್ಯಾಪುರ ಎಂದು ಗುರುತಿಸಲಾಗಿದೆ. ಮೃತನ ಮರಣದಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಎಂದು ಮೃತನ ಪತ್ನಿ ಲಕ್ಷ್ಮವ್ವ ನಂದ್ಯಾಪುರ ದೂರು ನೀಡಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸಣ್ಣ ಅಪಘಾತ, ಬೈಕ್‌ ಸವಾರನಿಂದ ರೌಡಿಸಂ: ಸ್ಥಳೀಯರಿಂದ ಧರ್ಮದೇಟು
Next articleಯತ್ನಾಳ ಆಕ್ಷೇಪ: ಬಿಜೆಪಿ ತಂಡ ಪುನಾರಚನೆ