ಕಾರು ಪಲ್ಟಿ: ಇಬ್ಬರು ಸಾವು

0
64

ಮೊಳಕಾಲ್ಮೂರು: ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಬಳಿ ಕಾರು ಮಂಗಳವಾರ ಪಲ್ಟಿಯಾಗಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಮೂಲದ ಮೌಲಾ(೩೫), ರಹೆಮಾನ್(೧೪) ಮೃತರು. ರಾ.ಹೆ ೧೫೦ಎರಲ್ಲಿ ನಡೆದ ಭೀಕರ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರು ಕಡೆಯಿಂದ ಯಾದಗಿರಿಗೆ ತೆರಳುತ್ತಿದ್ದ ಕಾರು. ಡಿವೈಡರ್‌ಗೆ ಡಿಕ್ಕಿ ಹೊಡೆದು ಬರೋಬ್ಬರಿ ೧೪ ಬಾರಿ ಪಲ್ಟಿಯಾಗಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬೆಲೆ ಏರಿಕೆ ರಾಜಕೀಯವಾಗಿ ಬಳಸಿಕೊಳ್ಳಬಾರದು
Next articleಈ ಜೋಕರೇ ಮುಂದೆ ರಾಜ್ಯವಾಳುವುದು