ಕಾಫಿನಾಡಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

0
66

ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಗಾಳಿ-ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಸುರಿದ ಭಾರೀ ಮಳೆಗೆ ಸೇತುವೆ ಮುಳುಗಡೆಯಾಗಿದ್ದು, ಜನರು ಓಡಾಡಲು ಪರದಾಡುವ ಸ್ಥಿತಿ ಉಂಟಾಗಿದೆ, ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಬೈದುವಳ್ಳಿ ಹಾಗೂ ನೆರೆಹೊರೆಯ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ನದಿಯ ಹಳ್ಳಕೊಳ್ಳಗಳಿಗೆ ನೀರು ನುಗ್ಗಿ ಕಾಫಿ ಹಾಗೂ ಅಡಿಕೆ ತೋಟಗಳು ಜಲಾವೃತವಾಗಿವೆ. ಮೂಡಿಗೆರೆ ತಾಲೂಕಿನ ಹೆಸಗೋಡುವಿನಲ್ಲಿನ ಕಾಫಿತೋಟಗಳು ಸಂಪೂರ್ಣವಾಗಿ ನೀರಿನಿಂದ ಸುತ್ತುವರಿದಿದ್ದು, ಬೆಳೆಗಳಿಗೆ ಅಪಾರ ನಷ್ಟ ಸಂಭವಿಸುವ ಸಾಧ್ಯತೆ ಇದೆ.

Previous articleಶಿರಾಡಿ ಘಾಟ್ ಭೂಕುಸಿತ: ಮಂಗಳೂರು ಕಡೆ ಹೋಗುವವರಿಗೆ ಬದಲಿ ಮಾರ್ಗ
Next articleಹಳ್ಳಿ ಹಳ್ಳಿಗೂ ಬರಲಿವೆ ಜ್ಞಾನ ಸಂಪತ್ತು