ಕಾಡಾ ಅಧ್ಯಕ್ಷರನ್ನೇ ಒಳ ಬಿಡದ ಪೊಲೀಸರು

0
15

ಬಳ್ಳಾರಿ: ಉಪಮುಖ್ಯಂಮತ್ರಿ ಡಿ.ಕೆ.ಶಿವಕುಮಾರ್ ತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ ವೇಳೆ ಕಾಡಾ ಅಧ್ಯಕ್ಷ ಹಸನ್ ಸಾಬ ದೋಟಿಹಾಳ ಅವರನ್ನೇ ಒಳಬಿಡದೆ ತಡೆದು ನಿಲ್ಲಿಸಲಾಯಿತು.


ತುಂಗಭದ್ರಾ ‌ಜಲಾಶಯದ ಕ್ರಸ್ಟ್‌ ‌ಗೇಟ್ ೧೯ ಕಳಚಿದ ಹಿನ್ನೆಲೆಯಲ್ಲಿ ‌ಜಲಸಂಪನ್ಮೂಲ‌ ಸಚಿವ ಡಿ.ಕೆ ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಎನ್.ಎಸ್.ಭೋಸರಾಜು, ನಾಲ್ಕು ಜಿಲ್ಲೆಯ ಶಾಸಕರು ಸೇರಿ ಇತರೆ ಮುಖಂಡರು ಆಗಮಿಸಿದ ವೇಳೆ ಕ್ರಸ್ಟ್‌ ಗೇಟ್ ವೀಕ್ಷಣೆಗೆ ತೆರಳಿದರು. ಹಿಂದೆ ಬಂದ ಹಸನ್ ಸಾಬ ದೋಟಿಹಾಳ ಕಾರು ತಡೆದರು. ಈ ವೇಳೆ ದೋಟಿಹಾಳ ಹಿಂಬಾಲಕರು ಪೊಲೀಸರ‌ ನಡುವೆ‌ ಮಾತಿನಚಕಮಕಿ ನಡೆಯಿತು. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರವಾಣಿ ಕರೆ ಮಾಡಿ ಬಂದೋಬಸ್ತ್ ನಿರತ ಪೊಲೀಸರ ಜತೆ ಮಾತನಾಡಿಸಿದ ವೇಳೆ ಕಾರು ಬಿಡದೇ ಅವರೊಬ್ಬರನ್ನೇ ಒಳಬಿಡಲಾಯಿತು. ನಡೆದುಕೊಂಡೆ ಕಾಡ ಅಧ್ಯಕ್ಷರು ಒಳ ಹೋದ ಘಟನೆ ನಡೆಯಿತು.

Previous articleಮಹಾರಾಜ ಟ್ರೋಫಿಯ ವೇಳಾಪಟ್ಟಿ ಪ್ರಕಟ
Next article೧೯ನೇ ಕ್ರಸ್ಟ್ ಗೇಟ್ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ