ಕಾಂತಾರದಲ್ಲಿ ಅಭಿನಯಿಸುವ ಅವಕಾಶ

0
15


ಮಂಗಳೂರು: ಆಭೂತಪೂರ್ವ ಯಶಸ್ಸು ಪಡೆದ ‘ಕಾಂತಾರ ಒಂದು ದಂತಕಥೆ’ಯ ಮೊದಲ ಅಧ್ಯಾಯದ ಚಿತ್ರೀಕರಣಕ್ಕೆ ನಟ ರಿಷಬ್ ಶೆಟ್ಟಿ ಸಿದ್ಧತೆ ಆರಂಭಿಸಿದ್ದು, ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಿಷನ್ ಕರೆಯಲಾಗಿದೆ.
ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿತ್ತು. ‘ಕಾಂತಾರ ಒಂದು ದಂತಕಥೆ’ಯ ‘ಕಾಂತಾರ’ದ ಪ್ರೀಕ್ವೆಲ್ ಆಗಿದ್ದು, ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಕರಾವಳಿ ಭಾಗದ ಕಥೆ ಚಿತ್ರದಲ್ಲಿರುವುದರಿಂದ ಚಿತ್ರೀಕರಣ ಕರಾವಳಿಯಲ್ಲಿ ನಡೆಯಲಿದೆ. ಕಾಂತಾರದಲ್ಲಿ ಕನ್ನಡದ ಪ್ರತಿಭೆಗಳಿಗೆ ಅವಕಾಶ ನೀಡಿದ್ದ ರಿಷಬ್ ‘ಕಾಂತಾರ ಒಂದು ದಂತ ಕಥೆಯಲ್ಲೂ
ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಮತ್ತಷ್ಟು ಹೊಸ ಪ್ರತಿಭೆಗಳನ್ನು, ರಂಗಭೂಮಿ ಕಲಾವಿದರನ್ನು ಈ ಭಾಗದಲ್ಲಿ ಹೆಚ್ಚಾಗಿ ಪರಿಚಯಿಸುವ ನಿಟ್ಟಿನಲ್ಲಿ ಆಡಿಷನ್ ಕರೆಯಲಾಗಿದೆ. ಆಸಕ್ತರು ಞಚಿಟಿಣಚಿಡಿಚಿ.ಜಿiಟmಗೆ ಭೇಟಿ ನೀಡಿ ತಮ್ಮ ಮಾಹಿತಿಯನ್ನು ದಾಖಲಿಸಬಹುದು. ಡಿ.೧೪ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.

Previous article‘ಹಾಯ್ ನಾನ್ನ’ ತಂಡಕ್ಕೆ ಅಭಿನಂದನೆ ತಿಳಿಸಿದ ಶಿವಣ್ಣ
Next articleಪತ್ರಕರ್ತರು ಸಮತೋಲನ ಬರವಣಿಗೆ ಸಾಧಿಸಬೇಕು