ಕಾಂಗ್ರೆಸ್‌ಗೆ 150 ಸ್ಥಾನ ಪಕ್ಕಾ: ಡಿಕೆಶಿ

0
50
D K SHIVAKUMAR

ಬಳ್ಳಾರಿ: ಕರ್ನಾಟಕದಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ರಾಜ್ಯದ 40 ಪರ್ಸೆಂಟ್ ಸರ್ಕಾರವನ್ನು ಕಿತ್ತೊಗೆಯುವುದು ಈಗಿನ ಅಗತ್ಯವಾಗಿದೆ ಎಂದರು.
ರಾಹುಲ್ ಭಾರತ್ ಜೋಡೊ ಯಾತ್ರೆಯ ಅಂಗವಾಗಿ ನಡೆದ ಐಕ್ಯತಾ ಸಮಾವೇಶದಲ್ಲಿ ಪ್ರಮುಖ-ಪ್ರಖರ ಭಾಷಣ ಮಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದರು.
2023ರಲ್ಲಿ ಬಿಜೆಪಿಯನ್ನು ತೊಲಗಿಸಲು ಜನತೆ ಕೈಜೋಡಿಸಲಿದ್ದಾರೆ. ರಾಜ್ಯದಲ್ಲಿ ರಾಹುಲ್ ಪಾದಯಾತ್ರೆಗೆ ವ್ಯಕ್ತವಾಗಿರುವ ಅಭೂತಪೂರ್ವ ಜನಬೆಂಬಲ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂಬುದನ್ನು ತೋರಿಸುತ್ತದೆ ಎಂದು ಶಿವಕುಮಾರ ಹೇಳಿದರು.
ಭಾರತ್ ಜೋಡೊ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕಾಗಿ ನಡೆಯುತ್ತಿರುವುದಲ್ಲ. ಅಥವಾ ರಾಹುಲ್ ಅವರನ್ನು ಪ್ರಧಾನಿಯನ್ನಾಗಿಸುವುದಕ್ಕಾಗಿಯೂ ಅಲ್ಲ. ಇದು ಜನತೆಗಾಗಿ ಎಂದರು.
ವಾಗ್ದಾನ ನಮ್ಮದು… ವಿಶ್ವಾಸ ನಿಮ್ಮದು… ನುಡಿದಂತೆ ನಡೆಯುತ್ತೇವೆ. ನಮ್ಮನ್ನು ಆಶೀರ್ವದಿಸಿ ಎಂದು ಶಿವಕುಮಾರ ಜನತೆಯನ್ನು ಕೋರಿದರು.

Previous articleಹಲಾಲ್ ಗುರುತು ಇರುವ ವಸ್ತು ಖರೀದಿ ಬೇಡ: ಮುತಾಲಿಕ್
Next articleರಣವೀಳ್ಯ ನೀಡಿದ `ಹಸ್ತ’ ಪಡೆ