ಕಾಂಗ್ರೆಸ್ ಹೆಸರು ಹೇಳಲು ಶೆಟ್ಟರಗೆ ಭಯ

0
18

ಹುಬ್ಬಳ್ಳಿ: ಕಾಂಗ್ರೆಸ್ ಹೆಸರು ಹೇಳಿದರೆ ಬರಬಹುದಾದ ಮತಗಳೂ ತಪ್ಪುವ ಭೀತಿಯನ್ನು ಜಗದೀಶ ಶೆಟ್ಟರ ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಹೆಸರು ಹೇಳದೇ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರಣಕ್ಕಾಗಿಯೇ ಹೋರಾಟ ವೈಯಕ್ತಿಕವಾಗಿ ತಮ್ಮ ಹಾಗೂ ಬಿಜೆಪಿ ನಡುವೆ ನಡೆಯುತ್ತಿದೆ ಎಂಬುದಾಗಿ ಹೇಳಲಾರಂಭಿಸಿದ್ದಾರೆ ಎನ್ನುವ ಮೂಲಕ ಶೆಟ್ಟರ ಅವರಿಗೆ ಟಾಂಗ್ ನೀಡಿದರು.
ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆಯೋ, ಅಥವಾ ಶೆಟ್ಟರ ಮತ್ತು ಬಿಜೆಪಿ ನಡುವೆಯೋ' ಎನ್ನುವ ಪತ್ರಕರ್ತರ ಪ್ರಶ್ನೆಗೆ ಕೇಂದ್ರ ಸಚಿವರು ಈ ಉತ್ತರ ನೀಡಿದರು.ವಿಷಯವಾಗಿ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಈ ಬಾರಿ ಸೆಂಟ್ರಲ್‌ನಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಗೆಲ್ಲಲಿದೆ ಎಂಬುದು ಮಾತ್ರ ಸ್ಪಷ್ಟ’ ಎಂದರು.

Previous articleಬಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್ ದೇಶಬಿಟ್ಟು ಹೋಗಬೇಕಾಗುತ್ತೆ
Next article‘ನಾನೊಬ್ಬ ಬಜರಂಗಿ’ ಅಭಿಯಾನ ಶುರು