ಕಷ್ಣಾ ನದಿಯಲ್ಲಿ ಬೋಟ್ ಪಲ್ಟಿ

0
12

ಚಿಕ್ಕೋಡಿ: ಜಾಕ್‌ವೆಲ್ ದುರಸ್ತಿಗೆ ಹೊರಟಿದ್ದ ಎನ್‌ಡಿಆರ್‌ಎಫ್‌ನ ಬೋಟ್ ಪಲ್ಟಿಯಾದ ಘಟನೆ ಗುರುವಾರ ರಾಯಬಾಗ ತಾಲೂಕಿನ ಕುಡಚಿ ಬಳಿ ಕೃಷ್ಣಾ ನದಿಯಲ್ಲಿ ನಡೆದಿದ್ದು ಅದೃಷ್ಟವಶಾತ್ ಬೋಟ್‌ನಲ್ಲಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಕುಡಚಿ ಪಟ್ಟಣಕ್ಕೆ ನೀರು ಸರಬರಾಜ ಮಾಡುವ ಜಾಕ್‌ವೆಲ್ ಮುಳುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ಸಿಬ್ಬಂದಿಯೊಂದಿಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಹೆಸ್ಕಾಂನ ಓರ್ವ ಲೈನ್‌ಮನ್, ಒಬ್ಬ ವಾಟರ್‌ಮನ್ ಹಾಗೂ ಎನ್‌ಡಿಆರ್‌ಎಫ್‌ನ ಸಿಬ್ಬಂದಿಯನ್ನು ಮತ್ತೊಂದು ಬೋಟ್ ಸಹಾಯದಿಂದ ರಕ್ಷಿಸಲಾಗಿದೆ. ಲೈಫ್ ಜಾಕೆಟ್ ಇದ್ದುದರಿಂದ ಎಲ್ಲರೂ ಬಚಾವಾಗಿದ್ದಾರೆ. ಈ ವೇಳೆ ನೀರಿನಲ್ಲಿ ಹರಿದು ಹೋಗುತ್ತಿದ್ದ ಲೈನ್‌ಮೆನ್ ಹಾಗೂ ವಾಟರ್‌ಮನ್ ನದಿಯಲ್ಲಿನ ಮರ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

Previous articleವಯನಾಡಿಗೆ ಭೇಟಿ ನೀಡಿದ ರಾಹುಲ್ ಗಾಂಧಿ
Next articleಗೋವಾದಲ್ಲಿ ನಿರಂತರ ಮಳೆ, ಪ್ರವಾಹ ಪರಿಸ್ಥಿತಿ