ಕಲ್ಯಾಣ ಕರ್ನಾಟಕಕ್ಕೆ ಪ್ರಾದೇಶಿಕ ನ್ಯಾಯ ನೀಡಿರುವುದು ನಮ್ಮ ಪಾಲಿಗೆ ಹೆಮ್ಮೆ

0
13

ಬೆಂಗಳೂರು: ಕಲ್ಯಾಣ ಕರ್ನಾಟಕಕ್ಕೆ ಪ್ರಾದೇಶಿಕ ನ್ಯಾಯ ನೀಡಿರುವುದು ನಮ್ಮ ಪಾಲಿಗೆ ಹೆಮ್ಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ( 371J ) ದೊರೆತು ಒಂದು ದಶಕ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಆಯೋಜಿಸಿರುವ “ಕಲ್ಯಾಣ ಕರ್ನಾಟಕ ದಿನಾಚರಣೆ – 2024” ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಜಾತಿ,ಧರ್ಮ, ಲಿಂಗ ಮತ್ತು ಪ್ರದೇಶ ಆಧರಿತ ತಾರತಮ್ಯ ನಿವಾರಣೆಯಾದಾಗಲೇ ನಿಜವಾದ ಸಮಸಮಾಜ ನಿರ್ಮಾಣವಾಗಲು ಸಾಧ್ಯ ಎನ್ನುವುದು ನನ್ನ ಅಚಲವಾದ ನಂಬಿಕೆ. ಸಾಮಾಜಿಕ ನ್ಯಾಯ ಪಾಲನೆಯ ರೀತಿಯಲ್ಲಿಯೇ ಪ್ರಾದೇಶಿಕ ನ್ಯಾಯವನ್ನು ಕೂಡಾ ಪಾಲಿಸಿಕೊಂಡು ಬರಬೇಕೆನ್ನುವುದು ನಮ್ಮ ಪಕ್ಷ ಮತ್ತು ಸರ್ಕಾರದ ಬದ್ದತೆ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಪ್ರಾದೇಶಿಕ ನ್ಯಾಯ ನೀಡಿರುವುದು ನಮ್ಮ ಪಾಲಿಗೆ ಹೆಮ್ಮೆ ಮತ್ತು ತೃಪ್ತಿಯ ಸಾಧನೆ. ನಾವೆಲ್ಲ ಕನ್ನಡಿಗರು ಸೇರಿ ಕಲ್ಯಾಣ ಕರ್ನಾಟಕ ಉತ್ಸವದ ದಿನವನ್ನು ಸಂಭ್ರಮದಿಂದ ಆಚರಿಸೋಣ ಎಂದಿದ್ದಾರೆ

Previous articleಸಚಿವ ಸಂಪುಟ ಸಭೆ: ಕೆಂಭಾವಿ ತಾಲೂಕು ಬೇಡಿಕೆಗೆ ಸಿಗುತ್ತಾ ಮನ್ನಣೆ..?
Next articleಪ್ರತಿ ಮನೆಯಲ್ಲೂ ವಿದ್ಯುತ್ ಉತ್ಪಾದಕತೆ…