ಕುಷ್ಟಗಿ: ಕಲುಷಿತ ನೀರು ಸೇವಿಸಿ ವಾಂತಿಭೇದಿಯಿಂದ ನರಳುತ್ತಿದ್ದ ಬಾಲಕಿ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾಗಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಓರ್ವ ಬಾಲಕಿ ಸಾವನಪ್ಪಿದ ದುರ್ಘಟನೆ ಸಂಭವಿಸಿದೆ.
ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ 20 ರಿಂದ 40 ಜನರು ಕಲುಷಿತ ನೀರು ಸೇವಿಸಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕೆಂಬು ಉದ್ದೇಶದಿಂದಾಗಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ತೆರೆಯಲಾಗಿದ್ದು. ಆದರೆ, ಹೆಚ್ಚಿನ ಚಿಕ್ಸಿತೆಗೆ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳನ್ನು ಕರೆತರಲಾಗುತ್ತಿದೆ. ಅದೇ ರೀತಿಯಾಗಿ ಅತ್ತೆ ಮನೆಯಲ್ಲಿದ್ದ ನಾಲ್ಕನೇ ತರಗತಿಯ ಬಾಲಕಿ ನಿರ್ಮಲ ಈರಪ್ಪ ನಿರಲೂಟಿ ಈ ಬಾಲಕಿಗೆ ಕಳೆದೆರಡು ದಿನಗಳಿಂದ ವಾಂತಿಭೇದಿ ಆರಂಭವಾಗಿದ್ದು ಚಿಕಿತ್ಸೆ ಕೊಡಿಸಿಲ್ಲ. ಆದರೆ ಬುಧವಾರ ವಾಂತಿಭೇದಿ ವಿಪರೀತವಾದ ಹಿನ್ನೆಲೆಯಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ಕರೆ ತರಲಾಗಿದೆ ವೈದ್ಯರು ಚಿಕಿತ್ಸೆ ನೀಡಿ ಜೀವವನ್ನು ಉಳಿಸಲು ಎಷ್ಟೇ ಪ್ರಯತ್ನ ನಡೆಸಿದರು ಚಿಕಿತ್ಸೆ ಫಲಕಾರಿಯಾಗದೆ ನಿರ್ಮಲ ಈರಪ್ಪ ನಿರಲೂಟಿ(೯) ಸಾವನ್ನಪ್ಪಿದ್ದಾಳೆ.
ಮೃತಪಟ್ಟ ಬಾಲಕಿಯ ತಂದೆ ತಾಯಿಗಳು ಇಬ್ಬರು ದುಡಿಯಲು ಬೆಂಗಳೂರಿಗೆ ತೆರಳಿದ್ದು, ಸಾವನಪ್ಪಿದ ಬಾಲಕಿ ಅತ್ತೆ ಮನೆಯಲ್ಲಿ ಇರುವುದರಿಂದ ಅತ್ತೆ ಹನುಮವ್ವ ಬಾಲಕಿಯ ತಂದೆ ತಾಯಿಗಳಿಗೆ ವಾಂತಿಭೇದೆ ಆಗಿರುವ ಬಗ್ಗೆ ತಿಳಿಸಿದ್ದಾಳೆ. ಮೃತಪಟ್ಟ ಬಾಲಕಿಯ ತಂದೆ ಈರಪ್ಪ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದ್ದಾರೆ ಅದೇ ರೀತಿಯಾಗಿ ಹನುಮವ್ವ ಒಂದು ಟಂಟಂನಲ್ಲಿ ಚಿಕಿತ್ಸೆಗೆ ಎಂದು ದಾಖಲಿಸಿದ್ದಾಳೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ದುಡಪಟ್ಟಿದೆ. ಮೃತಪಟ್ಟ ಬಾಲಕಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂತು.
ವೈದ್ಯರ ಮೇಲೆ ಆರೋಪ: ವಾಂತಿಬೇಧೆಯಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾದರೆ ಆಸ್ಪತ್ರೆಯಲ್ಲಿರುವಂತಹ ವೈದ್ಯರು ಚಿಕಿತ್ಸೆ ನೀಡುವ ಬದಲು ನಿರ್ಲಕ್ಷ ಧೋರಣೆ ತಾಳುತ್ತಿದ್ದಾರೆ ಎನ್ನುವ ಆರೋಪ ವೈದ್ಯರ ಮೇಲೆ ಕೇಳಿ ಬಂದಿದೆ.