ಕಲಬುರ್ಗಿಯಲ್ಲಿ ಬಂದ್‌ಗೆ ಬೆಂಬಲ ಇಲ್ಲ

0
28

ಕಲಬುರಗಿ: ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕಲಬುರಗಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂದಿನಂತೆ ಬಸ್, ಆಟೋ ಇತರ ವಾಹನಗಳ ಸಂಚಾರ ಇತ್ತು. ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ತೆರೆದಿರುವುದು ಕಂಡು ಬಂತು.
ಯಾವುದೇ ಕನ್ನಡಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಹೋರಾಟ ಮಾಡುವುದಾಗಲಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವುದಾಗಲಿ ಮಾಡಿಲ್ಲ. ಹಲವಾರು ಕನ್ನಡ ಪರ ಸಂಘಟನೆಗಳು ವಾಟಾಳ್ ನಾಗರಾಜ್ ಅವರ ಕರ್ನಾಟಕ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

Previous articleಹನಿಟ್ರ‍್ಯಾಪ್ ತನಿಖೆ: ಸಿಎಂ, ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ
Next articleಕರ್ನಾಟಕ ಬಂದ್: ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಷ್ಟೇ ಸೀಮಿತ