ಕಲಬುರಗಿ: ಹನಿಟ್ರ‍್ಯಾಪ್ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ, ಈಗಾಗಲೇ ಸದನದಲ್ಲಿ ಚರ್ಚೆ ಆಗಿದೆ. ಮುಖ್ಯಮಂತ್ರಿ ಕುರ್ಚಿಗೆ ಸುತ್ತುವರೆದಿರುವ ಪ್ರಕರಣ ಇದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಆಡಳಿತ ಪಕ್ಷದಲ್ಲಿ ಸಿಎಂ ಕುರ್ಚಿ ಸುತ್ತುವರಿದಿದೆ. ಈಗ ಅವರು ದೂರು ಕೊಡಲಿ, ಕೊಟ್ಟ ಮೇಲೆ ಏನಾಗುತ್ತೆ ನೋಡೊಣ. ಎಲ್ಲಾ ಸಚಿವರು ಹೇಳಿಕೆ ಕೊಡುತ್ತಿದ್ದಾರೆ. ಇನ್ನು ಸಚಿವ ಕೆ.ಎನ್ ರಾಜಣ್ಣ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಅವರು ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ನಿಲ್ಲಿಸಲಿ. ಸಿಎಂ ಕುರ್ಚಿಗೆ ಹನಿಟ್ರ‍್ಯಾಪ್ ಸಂಬಂಧ ಪ್ರಕರಣವನ್ನು ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ ಅವರಿಗೆ ಕೇಳಬೇಕು. ಕಾಂಗ್ರೆಸ್‌ನಲ್ಲಿರುವ ಆಂತರಿಕ ಗೊಂದಲದಿಂದ ಪ್ರಕರಣ ಹೊರ ಬರುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಕ್ಷೀಪ್ರ ಬೆಳವಣಿಗೆ ನಡೆಯಲಿದೆ ಎಂದರು.
ಬಿಜೆಪಿ ಮುಸ್ಲಿಂರ ವಿರೋಧಿ ಅಲ್ಲ
ಬಿಜೆಪಿ ಮುಸ್ಲಿಂರ ವಿರೋಧಿ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ. ಮುಸ್ಲಿಂರಿಗೆ ತೃಪ್ತಿ ಮಾಡುವ ಮೂಲಕ ಹಿಂದುಗಳಿಗೆ ಅಪಮಾನ ಮಾಡುವ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ಕರೆ ಕೊಟ್ಟಿದೆ ಎಂದರು.
ರಾಜ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಒಲೈಕೆಯೆ ಆಗಿದೆ ಹೊರತು ಅಭಿವೃದ್ಧಿ ಬಜೆಟ್ ಅಲ್ಲ. ಅಲ್ಪಸಂಖ್ಯಾತರ ಒಲೈಕೆ ಬಗ್ಗೆ ನಾವು ಹೋರಾಟ ಮಾಡುವುದಕ್ಕೆ ಮುಂದಾಗಿದ್ದೆವೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಜೊತೆ ಸಂಪರ್ಕಿಸಿದ್ದೇನೆ. ಎರಡು ದಿನ ಬಿಟ್ಟು ಬೆಂಗಳೂರಿಗೆ ತೆರಳಿ ಕುಮಾರಸ್ವಾಮಿ ಜೊತೆ ಚರ್ಚಿಸಿ ಹೋರಾಟಕ್ಕೆ ಬೆಂಬಲಿಸುವ ವಿಶ್ವಾಸವಿದೆ. ಜೆಡಿಎಸ್ ಜತೆ ಎಲ್ಲವೂ ಸರಿ ಇದೆ. ಅವರು ಕೂಡ ನಮಗೆ ಬೆಂಬಲ ಕೊಡುತ್ತಾರೆ ಎಂದರು.
ಅಧಿಕಾರಕ್ಕೆ ಸೀಮಿತಗೊಳಿಸಿ ಅಮಾನತು ಮಾಡಲಿ
ಈ ಹಿಂದೆ ಪರಿಷತ್‌ನಲ್ಲಿ ಧರ್ಮೆಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದನೆ ಹೊರ ಹಾಕಿದರು. ಈಗ 18 ಶಾಸಕರ ಅಮಾನತು ಮಾಡಿರುವುದಕ್ಕೇ ಏನು ಕಾರಣ? ಶಾಸಕರ ವರ್ತನೆ ಸರಿಯಿಲ್ಲ ಎಂದಾಗಿದ್ದರೆ ಅವರ ಅಧಿಕಾರಕ್ಕೆ ಸಿಮೀತವಾದಂತೆ ಅಮಾನತು ಮಾಡಬಹುದಾಗಿತ್ತು. ಆದರೆ ಆರು ತಿಂಗಳುಕಾಲ ಅಮಾನತುಗೊಳಿಸಿರುವುದು ಕಾನೂನು ಬಾಹಿರವಾಗಿದೆ. ಅಲ್ಲದೆ ಷರತ್ತು ಹಾಕಿರುವುದು ಸಹ ಸಂವಿಧಾನ ವಿರೋಧಿ ನಡೆ. ಯಾವುದೋ ಕೆಟ್ಟ ಗಳಿಗೆಯಲ್ಲಿ ನಮ್ಮವರು ಈ ರೀತಿ ನಡೆದುಕೊಂಡಿರಬಹುದು. 18 ಶಾಸಕರ ಅಮಾತಿನಿಂದ ಆ ಕ್ಷೇತ್ರದ ಜನರಿಗೆ ಮಾಡಿರುವ ಅಪಮಾನವೇ ಮತ್ತೇನು ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಶಾಸಕ ಬಸವರಾಜ ಮತ್ತಿಮೂಡ, ಎಂಎಲ್‌ಸಿಗಳಾದ ಶಶೀಲ್ ನಮೋಶಿ, ಸುನೀಲ್ ವಲ್ಯಾಪುರೆ, ಬಿ.ಜಿ. ಪಾಟೀಲ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಮತ್ತಿತರರಿದ್ದರು.