ಕರ್ನಾಟಕದಲ್ಲಿ ಭ್ರಷ್ಟ ಮುಕ್ತ ಸರ್ಕಾರ ಆಡಳಿತಕ್ಕೆ

0
12

ಹುಬ್ಬಳ್ಳಿ: ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿದ ಕೆಲಸಗಳನ್ನು ಕರ್ನಾಟಕದಲ್ಲೂ ಮಾಡಲು ಬದ್ಧವಾಗಿದೆ. ಆರೋಗ್ಯ, ಶಿಕ್ಷಣ, ವಿದ್ಯುತ್, ಕುಡಿಯುವ ನೀರಿನ ಕ್ಷೇತ್ರದಲ್ಲಿ ನಾವು ಸಾಧನೆ ಮಾಡಿ ತೋರಿಸಿದ್ದೇವೆ. ಕರ್ನಾಟಕವನ್ನು ಸ್ವಚ್ಛ ಮಾಡಲು ಭ್ರಷ್ಟ ಮುಕ್ತ ಸರ್ಕಾರ ಆಡಳಿತಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಮತದಾರರು ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವದಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೇಳಿದರು.
ಇಲ್ಲಿನ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಾದ ವಿಕಾಸ ಸೊಪ್ಪಿನ, ಬಸವರಾಜ ತೇರದಾಳ ಹಾಗೂ ಎಂ. ಅರವಿಂದ ಪರವಾಗಿ ಮತಯಾಚನೆ ಮಾಡಿ, ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕವನ್ನು ಸ್ವಚ್ಛ ಮಾಡಲು ಭ್ರಷ್ಟಾಚಾರ ಮುಕ್ತ ಸರ್ಕಾರ ಬರಬೇಕು. ಈಗಿರುವ ಸರ್ಕಾರ ತೆಗೆದು ಹಾಕಬೇಕು ಎಂದರು.

Previous articleಹರಿಹರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದಿಗಾವಿ ಶ್ರೀನಿವಾಸ್
Next articleಶೆಟ್ಟರ್ ಟಿಕೆಟ್ ನಿರಾಕರಣೆಗೆ ನಡ್ಡಾ ಸಮರ್ಥನೆ