ಕರ್ನಾಟಕಕ್ಕೆ ೮೦೦೬ ಕೋಟಿ ರೂ. ಅನುದಾನ ಮಂಜೂರು

0
16

ಹುಬ್ಬಳ್ಳಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ೨೪-೨೫ರ ವಾರ್ಷಿಕ ಯೋಜನೆಯಲ್ಲಿ ಕರ್ನಾಟಕ ರಾಜ್ಯದ ಒಟ್ಟು ೪೭೦ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗಾಗಿ ೮೦೦೬ ಕೋಟಿ ರೂ.ಗಳನ್ನು ಮಂಜೂರಿ ಮಾಡಿದೆ ಎಂದು ಆಹಾರ ಮತ್ತು ನಾಗರೀಕ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಹೊಸದಾಗಿ ೪೫೯ ಕಿಲೋ ಮೀಟರ್ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ(ಡಿ.ಪಿ.ಆರ್.) ಯನ್ನು ಸಿದ್ದಪಡಿಸಲು ೧೫ ಕೋಟಿ ರೂ. ಮಂಜೂರಿ ಮಾಡಿದೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಮೋದಿ ಸರಕಾರ ರಸ್ತೆಗಳ ಉನ್ನತೀಕರಣ ಹಾಗು ಸುಗಮ ಸಂಚಾರಕ್ಕೆ ಅತೀ ಮಹತ್ವ ನೀಡಿದ್ದು, ಕಳೆದ ಹತ್ತು ವರ್ಷಗಳಲ್ಲಿ ಅತೀ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳನ್ನು ಐತಿಹಾಸಿಕ ದಾಖಲೆ ರೀತಿಯಲ್ಲಿ ನಿರ್ಮಿಸಿದೆ. ಅದಕ್ಕಿಂತ ವೇಗವಾಗಿ ಈ ಬಾರಿ ರಸ್ತೆ ಮತ್ತು ಹೆದ್ದಾರಿಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಇದರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೫೨ಕ್ಕೆ ೧೨ ಕಿ.ಮೀ ಉದ್ದದ ಬೈಪಾಸ್ ನಿರ್ಮಾಣಕ್ಕಾಗಿ ೩೫೦ ಕೋಟಿ ರೂ. ಮಂಜೂರು ಮಾಡಿದೆ. ಪಟ್ಟಣದ ಮಧ್ಯದಿಂದ ಹಾದು ಹೋಗುವ ಹೆದ್ದಾರಿಯ ಕಾರಣ ಟ್ರಾಫಿಕ್ ಸಮಸ್ಯೆಗಳಿಂದಾಗಿ ನವಲಗುಂದದ ಸಾರ್ವಜನಿಕರು ರೋಸಿ ಹೋಗಿದ್ದರು. ಈಗ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ಲಭಿಸಿರುವುದರಿಂದ ಈ ಭಾಗದ ಜನರ ಬಹಳ ವರ್ಷಗಳ ಕನಸು ನನಸಾಗಿದೆ ಎಂದಿದ್ದಾರೆ.

Previous articleವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ
Next articleರಾಜಕೀಯದಲ್ಲಿ ತಾಳ್ಮೆ ಮುಖ್ಯ