ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲು ಕಾಂಗ್ರೆಸ್ ಸಂಸದರ ಮನವಿ

0
36

ಬೆಳಗಾವಿ: ನಬಾರ್ಡ್‌ನ ಅನುದಾನದ ಕೊರತೆ, ಎಲ್‌ಐಸಿ ಜೀವವಿಮಾ ಪ್ರತಿನಿಧಿಗಳ ಸಮಸ್ಯೆ ಸೇರಿದಂತೆ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುವ ಕುರಿತು ಕರ್ನಾಟಕದ ಸಂಸದರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನವಾಗಲಿ ಹಾಗೂ ಕೊಡುಗೆಗಳಾಗಲಿ ಇಲ್ಲದೇ ಇರುವುದನ್ನು ಅವರ ಗಮನಕ್ಕೆ ತರಲಾಯಿತು.
ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರೀಫೈನಾನ್ಸ್ ಅನ್ನು ಕಡಿಮೆಗೊಳಿಸಿದ ಬಗ್ಗೆ ಹಾಗೂ ಎಲ್‌ಐಸಿ ಪ್ರತಿನಿಧಿಗಳ ಬೇಡಿಕೆಯ ಬಗ್ಗೆ ಅವರ ಗಮನ ಸಳೆಯಲಾಯಿತು.
ಅಲ್ಲದೇ ರಾಯಚೂರು ಜಿಲ್ಲೆಯ ಏಮ್ಸ್ ಸ್ಥಾಪಿಸುವ ಬಗ್ಗೆ ಅವರು ವಿಶೇಷ ಕಾಳಜಿ ವಹಿಸಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಸಂಸದರು ಆಗ್ರಹ ಪಡಿಸಿದರು.
ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ಜಿ.ಕುಮಾರನಾಯಕ, ರಾಜಶೇಖರ ಹಿಟ್ನಾಳ, ಸಾಗರ ಖಂಡ್ರೆ, ಶ್ರೇಯಸ್ ಪಾಟೀಲ, ಸುನೀಲ ಬೋಸ್, ಡಾ. ಪ್ರಭಾ ಮಲ್ಲಿಕಾರ್ಜುನ್ ಈ ಸಂದರ್ಭದಲ್ಲಿ ಇದ್ದರು.

Previous articleಗಾಯಕ್ಕೆ ಹೊಲಿಗೆ ಬದಲು ಫೆವಿಕ್ವಿಕ್ ಹಾಕಿದ ನರ್ಸ್…!
Next articleಕೃಷ್ಣಮಠಕ್ಕೆ ಸಾಧ್ವಿ ಸರಸ್ವತಿ ಭೇಟಿ