ಕರ್ನಾಟಕ ಬಂದ್: ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಷ್ಟೇ ಸೀಮಿತ

0
23

ಹುಬ್ಬಳ್ಳಿ: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ ಕೆರೆ ನೀಡಿರುವ ಕರ್ನಾಟಕ ಬಂದ್’ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ–ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಬಸ್, ಆಟೋ ಸೇರಿದಂತೆ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು.
‘ಕರ್ನಾಟಕ ಬಂದ್’ಗೆ ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕರುನಾಡ ವಿಜಯಸೇನೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಂ.ಇ.ಎಸ್ ಮುಖಂಡನ ಪ್ರತಿಕೃತಿ ದಹಿಸಿ, ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಬಂದ್ ವಿರೋಧಿಸಿ ಬಂದ್ ಇಲ್ಲ ಬಂದ್ ಇಲ್ಲ ಎಂದು ಘೋಷಣೆ ಹಾಕಿ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಸದಸ್ಯರು ಗುಲಾಬಿ ಹೂ ಕೊಟ್ಟು ಬಂದ್ ವಿರೋಧಿಸಿದರು.

Previous articleಕಲಬುರ್ಗಿಯಲ್ಲಿ ಬಂದ್‌ಗೆ ಬೆಂಬಲ ಇಲ್ಲ
Next articleಬಹುಕೋಟಿ ವಂಚನೆ ಪ್ರಕರಣ: ಸಿಐಡಿ ವಶಕ್ಕೆ ಸ್ವಾಮೀಜಿ