ಕಲಘಟಗಿ: ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಹೀರೆಗುಡ್ಡದ ಬಳಿ ಇರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದ ಕರಡಿ ಹಠಾತ್ ದಾಳಿ ಮಾಡಿದ ಪರಿಣಾಮ ಮೂವರು ಗಾಯಗೊಂಡು ಒಬ್ಬ ರೈತ ತಪ್ಪಿಸಿಕೊಳ್ಳಲು ಹೋಗಿ ಗಾಯಗೊಂಡ ಘಟನೆ ನಡೆದಿದೆ.
ಬೆಳಿಗ್ಗೆ ಜಮೀನಿನ ಕೆಲಸಕ್ಕೆಂದು ಹೋದ ರೈತರು ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯದಲ್ಲಿ ಅರಣ್ಯ ಪ್ರದೇಶದಿಂದ ಬಂದ ಕರಡಿ ಹಠಾತ್ ದಾಳಿ ನಡೆಸಿದ್ದರಿಂದ ಶಂಕರಲಿಂಗ ಶೀಲವಂತರ ತೀವ್ರವಾಗಿ ಗಾಯಗೊಂಡಿದ್ದು ಬಸಪ್ಪ ಕೋಟಿ, ಗಂಗನಗೌಡ ನಡುವಿನಮನಿ, ಸಂತೋಷಗೌಡ ಪೊಲೀಸಗೌಡ್ರ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಗೊಂಡವರನ್ನು ಕಲಘಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.