Home Advertisement
Home ತಾಜಾ ಸುದ್ದಿ ಕನ್ಯಾಕುಮಾರಿಯಲ್ಲಿ ಮೋದಿ ೪೮ಗಂಟೆ ಧ್ಯಾನ

ಕನ್ಯಾಕುಮಾರಿಯಲ್ಲಿ ಮೋದಿ ೪೮ಗಂಟೆ ಧ್ಯಾನ

0
131

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಪ್ರಚಾರ ಅಂತ್ಯಗೊಂಡ ನಂತರ ಮೇ ೩೦ರಂದು ತಮಿಳ್ನಾಡಿನ ಕನ್ಯಾಕುಮಾರಿಗೆ ಆಗಮಿಸಿ ೪೮ ಗಂಟೆಗಳ ಕಾಲ ಸತತ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತಮಾತೆಯ ದರ್ಶನ ಪಡೆದ ಸ್ಥಳದಲ್ಲೇ ಅವರು ಧ್ಯಾನದಲ್ಲಿ ನಿರತರಾಗಲಿದ್ದಾರೆ. ನಿರಂತರ ಚುನಾವಣಾ ಪ್ರಚಾರದಿಂದ ಬಳಲಿರುವ ಅವರಿಗೆ ಈ ಧ್ಯಾನ ಮನೋಲ್ಲಾಸ ನೀಡಲಿದೆ. ಈ ಭೇಟಿಯ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳು ಇರುವುದಿಲ್ಲ.