ಕನ್ನಡ ನಮ್ಮ ಪ್ರೀತಿಯ ಭಾಷೆ

0
21

ಬೆಂಗಳೂರು: ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು, ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆ. ಅದಕ್ಕೆ ನಾನು ಕೃತಜ್ಞತೆ ಹೇಳುತ್ತಿದ್ದೇನೆ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ. ಸ್ಪೀಕರ್ ಅವರ ಕನ್ನಡದ ಮಾತಿನ ಬಗ್ಗೆ ಚರ್ಚೆಯ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಖಾದರ್, ಯತ್ನಾಳ್ ಪದೇ ಪದೇ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು. ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆಯಾಗಿದೆ. ಹೀಗಾಗಿ ನಾನು ಅದಕ್ಕೆ ಕೃತಜ್ಞತೆ ಹೇಳುತ್ತಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ. ಮಂಗಳೂರು ಕನ್ನಡ ಸುಂದರ ಭಾಷೆ, ಮೈಸೂರು ಕನ್ನಡ ಬೇರೆ, ಹೈದರಾಬಾದ್ ಕನ್ನಡ ಮುಂಬೈ ಕನ್ನಡ ಬೇರೆ. ನಮಗೆ ನಿಮ್ಮ ಭಾಷೆ ಅರ್ಥ ಆಗಬೇಕು. ಅದಕ್ಕೆ ಆ್ಯಪ್ ಹಾಕಿಕೊಡಿ. ಆವಾಗ ನಮಗೆ ಅರ್ಥ ಆಗುತ್ತದೆ ಎಂದರು. ಮೊಬೈಲ್ ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದೆ. ಲೋಕಸಭೆಯಲ್ಲಿ ಹಿಂದಿ ಟು ಕನ್ನಡ ಕನ್ನಡ ಟು ಹಿಂದಿ ಇದ್ದ ಹಾಗೆಯೇ ಸ್ಪೀಕರ್ ಟು ಕನ್ನಡ ಮಾಡಿ ಎಂದು ಯತ್ನಾಳ್ ಕಾಲೆಳೆದ್ರು. ಇದಕ್ಕೆ ಸೂಕ್ತ ರೀತಿಯಲ್ಲಿ ಉತ್ತರಿಸಿದ ಖಾದರ್‌ ಅವರು ಸದನದಲ್ಲಿ ಎಲ್ಲರಿಗೂ ಅನುಕೂಲ ಆಗುವಂತೆ ಮುಂದಿನ ದಿನಗಳಲ್ಲಿ ವಿಧಾನಸಭೆ ಡಿಜಿಟಲೈಶೇಷನ್‌ ಮಾಡುತ್ತೇವೆ ಎಂದರು.

Previous articleವ್ಯಾಪಕ ಮಳೆ: ಅನೇಕ ಕುಟುಂಬಗಳ ಸ್ಥಳಾಂತರ
Next articleಕೌಟುಂಬಿಕ ಕಲಹ : ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ