ಐರನ್ ಬಾಕ್ಸ್, ಕುಕ್ಕರ್: ಅದಕ್ಕೂ ಚುನಾವಣೆಗೂ ಸಂಬಂಧ ಇಲ್ಲ

0
18

ಬೆಂಗಳೂರು: ನಾನು ಸಿದ್ದರಾಮಯ್ಯ ಚುನಾವಣೆಗೊಸ್ಕರ ಕುಕ್ಕರ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ, ಈ ಕುರಿತು ಮಾದ್ಯಮಗಳಿಗೆ ಹೇಳಿರುವ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಪೋಸ್ಟ್‌ ಮಾಡಿ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ನಾನು ಸಿದ್ದರಾಮಯ್ಯ ಚುನಾವಣೆಗೊಸ್ಕರ ಕುಕ್ಕರ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮೊದಲು. ಜನವರಿ 27ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ವಿತರಣೆ ಮಾಡಲಾಗಿದೆ. ನನ್ನ ತಂದೆ ಸ್ವತಃ ಕೈಯಿಂದ ಕೂಡಾ ಇದನ್ನು ಕೊಟ್ಟಿಲ್ಲ. ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರು ಇರೋದೇ 1500 ಜನ. ಹೀಗಾಗಿ ಮತದಾರರಿಗೆ ಕುಕ್ಕರ್ ಹಂಚಿದ್ದಾರೆ ಅನ್ನುವುದರಲ್ಲಿ ಅರ್ಥವೇ ಇಲ್ಲ. ಚುನಾವಣೆಗೂ ಮುಂಚಿನ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

Previous articleಘೋಸ್ಟ್‌ ಘರ್ಜನೆಯ ಒಜಿಎಂ ಟ್ರ್ಯಾಕ್ ಬಿಡುಗಡೆ
Next articleಕಾವೇರಿ ವಿಚಾರದಲ್ಲಿ ಉಡಾಫೆ ಮುಂದುವರಿದರೆ ಜನ ದಂಗೆ ಏಳುತ್ತಾರೆ