ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ೨೦೨೫ರ ಆವೃತ್ತಿ ಮಾರ್ಚ್ ೨೨ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಮೇ ೨೫ರಂದು ನಡೆಯಲಿದೆ.
ಉದ್ಘಾಟನಾ ಪಂದ್ಯ ಮಾರ್ಚ್ ೨೨ ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದ್ದು, ಅಂತಿಮ ಪಂದ್ಯ ಕೂಡ ಕೋಲ್ಕತಾದಲ್ಲಿಯೇ ಜರುಗಲಿದೆ.
ಐಪಿಎಲ್‌ನ ೨೦೨೫ರ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ರಾತ್ರಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳುವ ಹತ್ತು ತಂಡಗಳನ್ನು ತಲಾ ಐದು ತಂಡಗಳಂತೆ ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಗುಂಪು ೧ ರಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿವೆ.
ಗುಂಪು ೨ ರಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿವೆ.
ಅಹಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು, ಲಕ್ನೋ, ಮುಲ್ಲನ್‌ಪುರ, ದೆಹಲಿ, ಕೋಲ್ಕತ್ತಾ, ಹೈದರಾಬಾದ್ ಮತ್ತು ಜೈಪುರ ನಗರಗಳ ಹೊರತಾಗಿ ಈ ಋತುವಿನ ಪಂದ್ಯಗಳು ಗುವಾಹಟಿ, ವಿಶಾಖಪಟ್ಟಣಂ ಮತ್ತು ಧರ್ಮಶಾಲಾದಲ್ಲಿಯೂ ಸಹ ಆಡಲ್ಪಡುತ್ತವೆ.
ಮುಲ್ಲನ್‌ಪುರದ ನಂತರ ಧರ್ಮಶಾಲಾ ಪಂಜಾಬ್ ಕಿಂಗ್ಸ್‌ನ ಎರಡನೇ ತವರು ಸ್ಥಳವಾಗಿದೆ, ಆದರೆ ರಾಜಸ್ಥಾನ್ ರಾಯಲ್ಸ್ ತನ್ನ ತವರು ಸ್ಥಳ ಜೈಪುರವನ್ನು ಹೊರತುಪಡಿಸಿ ಈಶಾನ್ಯ ನಗರದಲ್ಲಿ ಕೆಲ ಪಂದ್ಯಗಳನ್ನು ಆಡಲಿದೆ.
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮೊದಲ ಪಂದ್ಯವನ್ನು, ಮಾರ್ಚ್ ೨೩ ರಂದು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದ್ದು, ಈ ಪಂದ್ಯ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರೆ, ಈ ಬಾರಿ ರಜತ್ ಪಾಟಿದಾರ್ ನಾಯಕತ್ವದ ಜವಾಬ್ದಾರಿ ವಹಿಸಲಿದ್ದಾರೆ.
ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧ ಎರಡು ಪಂದ್ಯ ಆಡಲಿದೆ.
ಗುಂಪು ೧
ಕೋಲ್ಕತಾ ನೈಟ್ ರೈಡರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಜಸ್ಥಾನ ರಾಯಲ್ಸ್
ಚೆನ್ನೈ ಸೂಪರ್ ಕಿಂಗ್ಸ್
ಪಂಜಾಬ್ ಕಿಂಗ್ಸ್
ಗುಂಪು ೨
ಸನ್‌ರೈಸರ್ಸ್ ಹೈದ್ರಾಬಾದ್
ಡೆಲ್ಲಿ ಕ್ಯಾಪಿಟಲ್ಸ್
ಗುಜರಾತ್ ಟೈಟಾನ್ಸ್
ಮುಂಬೈ ಇಂಡಿಯನ್ಸ್
ಲಖನೌ ಸೂಪರ್ ಜೈಂಟ್ಸ್