Home Advertisement
Home ನಮ್ಮ ಜಿಲ್ಲೆ ಕೊಪ್ಪಳ ಐಟಿ ಅಧಿಕಾರಿಗಳ ದಾಳಿ

ಐಟಿ ಅಧಿಕಾರಿಗಳ ದಾಳಿ

0
50

ಕೊಪ್ಪಳ: ನಗರದ ಕೆಜಿಪಿ ಗೋಲ್ಡ್‌ ಜ್ಯುವಲೆರ್ಸ್ ಮತ್ತು ಸಿಲ್ಕ್ ಆ್ಯಂಡ್ ಸಾರೀಸ್ ಅಂಗಡಿ ಮೇಲೆ ಮಂಗಳವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಕಡತ ಪರಿಶೀಲನೆ ಮಾಡಿದ್ದಾರೆ.
ಹುಬ್ಬಳ್ಳಿ ಮೂಲದ ಉದ್ಯಮಿಗೆ ಸೇರಿದ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯ ಕೆಜಿಪಿ ಅಂಗಡಿಗೆ ಸುಮಾರು ೮ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳ ತಂಡವು ಶೋಧನೆ ನಡೆಸಿದ್ದಾರೆ.
ಮಂಗಳವಾರ ಬೆಳಿಗ್ಗೆ 10.30ಕ್ಕೆ ಆರಂಭವಾದ ಕಡತ ಪರಿಶೀಲನಾ ಕಾರ್ಯ ಮಧ್ಯಾಹ್ನ 3ಗಂಟೆಯವರೆಗೂ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು. ಐಟಿ ದಾಳಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Previous articleರಾಮನ ಮೇಲೆ ನನಗೆ ಭಕ್ತಿ ಇಲ್ಲ, ಅದಕ್ಕೆ ರಾಮಮಂದಿರಕ್ಕೆ ಹೋಗಲ್ಲ
Next articleಮಾಜಿ ಸಿಎಂ ದಿ. ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಗೌರವ