ಐಎಫ್‌ಎಸ್ ಪರೀಕ್ಷೆಯಲ್ಲಿ ಕೃಪಾಗೆ ೧೮ನೇ ಸ್ಥಾನ

0
10

ಹುಬ್ಬಳ್ಳಿ: ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ೪೪೦ ನೇ ರ‍್ಯಾಂಕ್ ಪಡೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದ ಕೃಪಾ ಅಭಯ ಜೈನ್ ಅವರು ಇಂಡಿಯನ್ ಫಾರೆಸ್ಟ್ ಸರ್ವಿಸ್ ಪರೀಕ್ಷೆಯಲ್ಲಿ ೧೮ನೇ ಸ್ಥಾನ ಪಡೆಯುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.
ಹುಬ್ಬಳ್ಳಿ ವಿಶ್ವೇಶ್ವರನಗರ ನಿವಾಸಿಯಾಗಿರುವ ಕೃಪಾ, ೩ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಮೀಸಲು ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇಂಡಿಯನ್ ಫಾರೆಸ್ಟ್ ಸರ್ವಿಸ್ (ಐಎಫ್‌ಎಸ್) ಇತ್ತೀಚೆಗೆ ಆಯೋಜಿಸಿದ್ದ ಪರೀಕ್ಷೆಯಲ್ಲಿ ೧೮ನೇ ಸ್ಥಾನ ಪಡೆಯುವ ಮೂಲಕ ಕೃಪಾ ಅವರು ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಇಂಡಿಯನ್ ರೈಲ್ವೆ ಮ್ಯಾನೇಜಮೆಂಟ್ ಸರ್ವಿಸ್ (ಐಆರ್‌ಎಂಎಸ್)ಗೆ ಆಯ್ಕೆಯಾಗಿ ಲಕ್ನೋದಲ್ಲಿ ಸೇವೆಗೆ ಸೇರಿದ್ದರು. ಹೆಚ್ಚಿನ ರ‍್ಯಾಂಕ್ ಪಡೆಯುವ ಉದ್ದೇಶದಿಂದ ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದರು.
ಯಾವುದೇ ತರಬೇತಿ ಪಡೆಯದೆ ಸ್ವಂತ ಅಧ್ಯಯನದಿಂದ ಅವರು ಈ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿ ಪ್ರೇರಣಾ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದ ಕೃಪಾ ಜೈನ್, ಶೇ.೯೭.೮೩ (೫೮೭ ಅಂಕಗಳು) ರಷ್ಟು ಫಲಿತಾಂಶದೊಂದಿಗೆ ಧಾರವಾಡ ಜಿಲ್ಲೆಗೆ ಟಾಪರ್ ಆಗಿದ್ದರು. ಬಳಿಕ ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಸಿಸ್ಕೊ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.

Previous articleಹಿಂದೂ ಜನಸಂಖ್ಯೆ ಕುಸಿತಕ್ಕೆ ಸಚಿವ ಜೋಶಿ ಕಳವಳ
Next articleಮೈತ್ರಿ ಮುಂದುವರಿಕೆಯ ಬಗ್ಗೆ ತೀರ್ಮಾನ ಶೀಘ್ರ