ಎಸ್ಪಿ ಅರುಣ್ ಸಹಿತ ನಾಲ್ವರಿಗೆ ಡಿಜಿ, ಐಜಿಪಿ ಪ್ರಶಂಸಾ ಪದಕ

0
31

ಉಡುಪಿ: ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭಿಸಲಾದ ‘ಡಿಜಿ ಮತ್ತು ಐಜಿಪಿ ಪ್ರಶಂಸಾ ಪದಕ’ 2024- 25ನೇ ಸಾಲಿನ ಪ್ರಶಸ್ತಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಸೇರಿದಂತೆ ಜಿಲ್ಲೆಯ ನಾಲ್ವರು ಪೊಲೀಸರು ಭಾಜನರಾಗಿದ್ದಾರೆ.
ಮಲ್ಪೆ ಕರಾವಳಿ ಕಾವಲು ಪೊಲೀಸ್‌ನ ಎಸ್.ಐ ವೈಲೆಟ್ ಫೆಮಿನಾ, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಗುರುದಾಸ್, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್‌ಸ್ಟೇಬಲ್ ಸಂತೋಷ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Previous article`ಉತ್ತರದ ಸಾಲು ದೀಪಗಳು’ ಕೃತಿ ಲೋಕಾರ್ಪಣೆ
Next articleಆಂಧ್ರದಲ್ಲಿ ರಸ್ತೆ ಅಪಘಾತ: ಬಿಜೆಪಿ ಮುಖಂಡ ಸೇರಿ ತುಮಕೂರಿನ ಮೂವರು ಸಾವು