ಎರಡು ಕುಟುಂಬಗಳ ನಡುವೆ ಸಿನಿಮೀಯ ಶೈಲಿಯಲ್ಲಿ ಫೈಟ್: 8 ಜನರಿಗೆ ಗಾಯ

0
6

ಕಲಬುರಗಿ:ಹಿಂದೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಆಚರಿಸುವ ಭಾವೈಕ್ಯತೆಯ ಮೊಹರಂ ಹಬ್ಬದ ದಿನದಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಕಲ್ಲಿನಿಂದ ಬಡಿದಾಡಿಕೊಂಡಿರುವಂತಹ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.

ಒಂದು ಸಮುದಾಯಕ್ಕೆ ಸೇರಿದ ಎನ್ನಲಾಗಿದ್ದ ಹೊನಗುಂಟಾ ಮತ್ತು ಗೋಟಾಳ್ ಕುಟುಂಬಗಳು ಮೊಹರಂ ನಡುವೆ ಪರಸ್ಪರವಾಗಿ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ಎಂಟು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ. ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ಕಳೆದ ಹಲವು ವರ್ಷಗಳಿಂದ ದ್ವೇಷವಿದ್ದು, ಈ ಗಲಾಟೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಮೊಹರಂ ಹಬ್ಬಕ್ಕೆಂದು ವಿವಿಧ ಗ್ರಾಮಗಳಿಂದ ಇಂಗಳಗಿ ಗ್ರಾಮಕ್ಕೆ ಬಂದಿದ್ದ ಜನರು,ಕಲ್ಲು ತೂರಾಟದಿಂದ ಭಯ ಭೀತರಾಗಿ ದಿಕ್ಕಪಾಲಾಗಿ ಓಡಿದ್ದಾರೆ.ಇನ್ನು ಪರಿಸ್ಥಿತಿ ಹತೋಟಿಗೆ ತರಲು ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಈ ಪ್ರಕರಣ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Previous articleಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದಿದ್ದ ಶರತ್‌ ಮೃತದೇಹ ಪತ್ತೆ
Next articleಕಲುಷಿತ ನೀರು ಸೇವನೆ: 26 ಜನರು ಅಸ್ವಸ್ಥ