ಎನ್ಐಎ ತನಿಖಾ ತಂಡದ ದಾಳಿ; ಎಸ್ ಡಿಪಿಐ ಮುಖಂಡ ವಶಕ್ಕೆ

0
12
ಇಸ್ಮಾಯಲ್‌ ಮನೆ

ಹುಬ್ಬಳ್ಳಿ: ನಗರದ‌ ನೂರಾನಿ ಪ್ಲಾಟ್ ನಲ್ಲಿರುವ ಎಸ್ ಡಿಪಿಐ ಮುಖಂಡರ ಮನೆ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಎಸ್ ಡಿ ಪಿಐ ಮುಖಂಡ ಇಸ್ಮಾಯಿಲ್ ನಾಲಾಬಂದ್ ಮನೆ ಮೇಲೆ ಎನ್ ಐಎ 10 ಅಧಿಕಾರಿಗಳ ತಂಡ ದಾಳಿ ನಡೆಸಿ, ಇಸ್ಮಾಯಿಲ್ ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದಿದೆ.
ಎನ್ಐಎ ಅಧಿಕಾರಿಗಳ ಕಾರ್ಯಾಚರಣೆ ಬಗ್ಗೆ ತಮಗೆ ಯಾವುದೇ ರೀತಿ ದಾಳಿ ಪೂರ್ವ ಮಾಹಿತಿ ಇರಲಿಲ್ಲ. ಇಂತಹ ದಾಳಿ ಸಂದರ್ಭದಲ್ಲಿ ಎನ್ಐಎ ತನಿಖಾ ತಂಡ ಮಾಹಿತಿ ನೀಡುವುದಿಲ್ಲ ಎಂದು ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ್ ಹೇಳಿದ್ದಾರೆ.

Previous articleಬೆಂಗಳೂರಿನ ರಸ್ತೆಗುಂಡಿಗೆ ಬಿದ್ದು ಬೈಕ್‌ ಸವಾರನ ಸ್ಥಿತಿ ಚಿಂತಾಜನಕ
Next articleಅನುಮತಿ ಪಡೆದು ಧಾರವಾಡದಿಂದಲೇ ಸ್ಪರ್ಧೆ: ವಿನಯ ಕುಲಕರ್ಣಿ