WhatsApp ನಕಲಿ ಸಂದೇಶ: ಪರಿಶೀಲಿಸದೆ ಯಾವುದೇ ಸಂದೇಶಗಳನ್ನು ಹಂಚಿಕೊಳ್ಳಬೇಡಿ
ಬೆಂಗಳೂರು: ಎಟಿಎಂಗಳು 2-3 ದಿನಗಳವರೆಗೆ ಮುಚ್ಚಲ್ಪಡುತ್ತವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು, ಈ ವೈರಲ್ #WhatsApp ಸಂದೇಶ ನಕಲಿ ಸಂದೇಶವಾಗಿದೆ ಎಂದು ಪತ್ರಿಕಾ ಮತ್ತು ಪ್ರಸಾರದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ ಘಟಕವು ಈ ಸುಳ್ಳು ಸುದ್ದಿಗಳನ್ನು ಬಯಲು ಮಾಡಿದೆ, ಹಾಗೂ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಪರಿಶೀಲಿಸದೆ ಯಾವುದೇ ಸಂದೇಶಗಳನ್ನು ಹಂಚಿಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ತಿಳಿಸಿದೆ.
ಭಾರತದಾದ್ಯಂತ ವಿಮಾನ ನಿಲ್ದಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿರುವ ಕುರಿತಂತೆ ಪಿಐಬಿ ನಕಲಿ ನಿರೂಪಣೆಯನ್ನು ಭೇದಿಸಿದ್ದು ರ್ಕಾರದಿಂದ ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳದ ಕಾರಣ ಅದನ್ನು ಫ್ಲ್ಯಾಗ್ ಮಾಡಿದೆ. “ನಕಲಿ ಸುದ್ದಿಯ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು #PIBFactCheck ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.