ಬೆಳಗಾವಿ: ಮುಗ್ಧ ಮರಾಠಿಗರ ಭಾವನೆಗಳನ್ಬು ಕೆರಳಿಸುವುದು ಅಷ್ಟೇ ಅಲ್ಲದಾರಿ ತಪ್ಪಿಸುತ್ತಿರುವ ಎಂಇಎಸ್ ಮುಖಂಡನೊಬ್ಬನಿಗೆ ಮಹಿಖೆಯರು ಪಾಠ ಕಲುಸಿದ್ದಾರೆ.
ನಗರದಲ್ಲಿ ನಡೆದ ಮಹಾರಾಷ್ಟ್ರ ಏಕೀಕರಣ ಸಭೆಯಲ್ಲಿ ಶುಭಂ ಶೆಳಕೆ ಮಾತನಾಡಲು ನಿಂತ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಹಿಳೆಯರ ಆವೇಶ ಕಂಡು ಹೌ ಹಾರಿದ ಶುಭಂ ಶೆಳಕೆ ತಕ್ಷಣ ಕೈ ಮುಗಿದು ಸಮಜಾಯಿಷಿ ನೀಡತೊಡಗಿದರು
ಆದರೂ ಹಠಕ್ಕೆ ಬಿದ್ದ ಮಹಿಳೆಯರು ತಮ್ಮ ವಾದವನ್ನು ಮುಂದುವರೆಸಿದಾಗ ಗೊಂದಲ ಸೃಷ್ಟಿಯಾಯಿತು. ಕೊನೆಗೆ ಎಲ್ಲರೂ ಮುಗಿಬಿದ್ದ ಸಂದರ್ಭದಲ್ಲಿ ಅದರಲ್ಲಿದ್ದ ಓರ್ವರು ಕೈ ಮಾಡಿದರು. ಅಂತಹ ವಿಡಿಯೋ ಈಗ ಸಾನಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ಈ ರೀತಿ ಶುಭಂ ಶೆಳಕೆಗೆ ತಪರಾತಿ ತೆಗೆದುಕೊಂಡವರು ಮಾಜಿ ಶಾಸಕ ಸಂಭಾಜಿ ಪಾಟೀಲರ ಸಂಬಂಧಿಕರು ಎಂದು ಗೊತ್ತಾಗಿದೆ.























