ಉತ್ತರ ಕರ್ನಾಟಕವು ಸಮೃದ್ಧ ಪ್ರತಿಭೆ ಮತ್ತು ಸಂಪನ್ಮೂಲಗಳು ಈ ಪ್ರದೇಶವನ್ನು ಕೈಗಾರಿಕಾ ಕೇಂದ್ರವಾಗಿಸಲು ಸೂಕ್ತ ನೆಲಬೀಡಾಗಿದೆ
ವಿಜಯಪುರ: ರ್ನಾಟಕವು ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಐಟಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜರುಗಿದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿನ ಆವಿಷ್ಕಾರ ಮತ್ತು ನಾವೀನ್ಯತೆಯ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ –ಇನ್ನೋವ-2024 ಉದ್ಘಾಟಿಸಿ ಮಾತನಾಡಿ ಕರ್ನಾಟಕವು ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಐಟಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಬಲ ಸಾಮರ್ಥ್ಯ ಹೊಂದಿದ್ದು, ಈ ಬೆಳವಣಿಗೆಯನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕದತ್ತ ವಿಸ್ತರಿಸಲಾಗುತ್ತಿದೆ. ಉತ್ತರ ಕರ್ನಾಟಕವು ಸಮೃದ್ಧ ಪ್ರತಿಭೆ ಮತ್ತು ಸಂಪನ್ಮೂಲಗಳು ಈ ಪ್ರದೇಶವನ್ನು ಕೈಗಾರಿಕಾ ಕೇಂದ್ರವಾಗಿಸಲು ಸೂಕ್ತ ನೆಲಬೀಡಾಗಿದೆ.
ನಮ್ಮ ಭಾಗದವರೇ ಆದ #Aequs ನ ಸಂಸ್ಥಾಪಕ ಡಾ. ಅರವಿಂದ ಮೆಳ್ಳಿಗೇರಿಯವರ ದೂರದೃಷ್ಟಿ, ಉತ್ತರ ಕರ್ನಾಟಕವನ್ನು ಏರೋಸ್ಪೇಸ್ ಉದ್ಯಮದ ಪ್ರಮುಖ ಕೇಂದ್ರವಾಗಿ ರೂಪಿಸುತ್ತಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಹೂಡಿಕೆದಾರರು ಮತ್ತು ಉದ್ಯೋಗದ ಅವಕಾಶಗಳನ್ನು ಕಂಡುಹಿಡಿಯಲು ಸರ್ಕಾರ ಆಕರ್ಷಕ ಪ್ರೋತ್ಸಾಹಗಳನ್ನು ನೀಡುತ್ತಿದೆ. INNOVA2024 ಕಾರ್ಯಕ್ರಮ, ಹೂಡಿಕೆದಾರರು ಮತ್ತು ನಾವೀನ್ಯತೆಯ ಮಾರ್ಗದರ್ಶಕರಿಗಾಗಿ ಜಾಗತಿಕ ವೇದಿಕೆಯನ್ನು ಒದಗಿಸುವ ಮೂಲಕ, ಈ ಪ್ರದೇಶದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.