ಉತ್ತಮ ಬೆಂಗಳೂರು, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ

0
25
ಬಸವರಾಜ ಬೊಮ್ಮಾಯಿ

ಬೆಂಗಳೂರು: ಉತ್ತಮ ಬೆಂಗಳೂರು, ನೂತನ ಉಪನಗರ, ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭವಿಷ್ಯದ ಬೆಂಗಳೂರು ನಿರ್ಮಿಸಲು ಹಾಗೂ ಹಳೆಯದನ್ನು ಸರಿಪಡಿಸಲು ಎರಡು ಯೋಜನೆಗಳು ಅಗತ್ಯವಿದೆ. ಇದಕ್ಕಾಗಿ ಅಗಾಧ ಹೂಡಿಕೆಯ ಅಗತ್ಯವಿದೆ. ತ್ಯಾಜ್ಯ ನಿರ್ವಹಣೆ, ಒಳಚರಂಡಿ, ರಾಜಕಾಲುವೆ, ರಸ್ತೆ ನಿರ್ವಹಣೆಯ ಸುಧಾರಣೆಯೂ ಆಗಬೇಕು. ಸಂಚಾರ ನಿರ್ವಹಣೆ ಸೇರಿದಂತೆ ಸಾರಿಗೆ, ಉಪನಗರ ರೈಲು, ರಸ್ತೆ, ಸಿಗ್ನಲ್ ಮುಂತಾದವನ್ನು ಇದು ಒಳಗೊಂಡಿದೆ ಎಂದರು.

Previous articleಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯ ನಿರೀಕ್ಷೆ: ಸಿಎಂ ಬೊಮ್ಮಾಯಿ
Next articleಪಕ್ಷ ಬದಲಿಸುವುದು ದೊಡ್ಡ ಅಪರಾಧ ಅಲ್ಲ