ಉಡುಪಿ ಜಿಲ್ಲೆ: ಮಳೆ ಹಾನಿ ಪರಿಹಾರಕ್ಕೆ ಕ್ರಮ

0
19
ಲಕ್ಷ್ಮೀ

ಬೆಂಗಳೂರು: ಮೃತರ ಕುಟುಂಬಕ್ಕೆ 24 ಗಂಟೆ ಒಳಗೆ ಸೂಕ್ತ ರೀತಿಯಲ್ಲಿ ಪರಿಹಾರ ಕೊಡುವಂತೆ ಹೇಳಿದ್ದೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಕರಾವಳಿ ಜಿಲ್ಲೆಯಲ್ಲಿ ಮಳೆರಾಯ ಆರ್ಭಟದಿಂದಾಗಿ ಎರಡು ಸಾವು ಆಗಿವಿರುವ ಕುರಿತು ಮಾತನಾಡಿದ ಅವರು ‌ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತತೆಯಿಂದ ಕೂಡಿದ್ದು, ನಾಳೆ ಬಜೆಟ್ ಮುಗಿಸಿ ಉಡುಪಿಗೆ ತೆರಳಲಿದ್ದೇನೆ, ಈಗಾಗಲೇ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳಿಂದ ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ನಾಳೆ ಉಡುಪಿಯಲ್ಲಿ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆದು ನೆರೆಪೀಡಿತ ಸ್ಥಳಗಳಿಗೆ ಭೇಟಿಯನ್ನು ಕೊಟ್ಟು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಿದ್ದೇನೆ ಎಂದರು.

Previous articleಗೃಹಜ್ಯೋತಿ: ಒಂದು ಕೋಟಿ ಗ್ರಾಹಕರಿಂದ ನೋಂದಣಿ
Next articleವ್ಯಾಪಕ ಮಳೆ: ಅನೇಕ ಕುಟುಂಬಗಳ ಸ್ಥಳಾಂತರ