ಉಚ್ಚಾಟನೆ ಬಳಿಕ ಒಗ್ಗಟ್ಟು ಹೆಚ್ಚಾಗುತ್ತಿದೆ

0
14

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ಬಳಿಕ ಬಿಜೆಪಿ ಪಕ್ಷಕ್ಕೆ ಲಾಭ ಆಗಿದೆ ಎಂದು ಹೇಳುವುದಿಲ್ಲ, ಆದರೆ ಒಗ್ಗಟ್ಟು ಹೆಚ್ಚಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು ಒಗ್ಗಟ್ಟಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಾತಿ ಗಣತಿ ಬಗ್ಗೆ ಕಾಳಜಿ ಇಲ್ಲ. ಚುನಾವಣೆ ಗೆಲ್ಲಬೇಕು ಎನ್ನುವುದಕ್ಕಾಗಿ ಈ ತರಹ ಬೂಟಾಟಿಕೆ ಮಾಡುತ್ತಾರೆ. ನಾಲ್ಕು ಗಂಟೆ ಅಲ್ಲ ನಾಲ್ಕು ವರ್ಷ ಆದರೂ ಜಾತಿ ಗಣತಿ ಮಾಡಲು ಸಾಧ್ಯವಿಲ್ಲ ಎಂದರು.

Previous articleಜೋಡಿ ಕೊಲೆ ಆರೋಪಿ ಆತ್ಮಹತ್ಯೆ
Next articleಕ್ರಿಕೆಟ್‌ ಆಡುವಾಗ ಬಾವಿಗೆ ಬಿದ್ದು ಬಾಲಕ ಸಾವು