ಈಶ್ವರಪ್ಪ ನಿರ್ಧಾರಕ್ಕೆ ಬೆಲ್ಲದ ಸ್ವಾಗತ

0
182
ಅರವಿಂದ ಬೆಲ್ಲದ

ಹುಬ್ಬಳ್ಳಿ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಿಸಿರುವುದನ್ನು ಶಾಸಕ ಅರವಿಂದ ಬೆಲ್ಲದ ಸ್ವಾಗತಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮತನಾಡದ ಅವರು, ಪಕ್ಷದ ಮುಖಂಡರ ಮತ್ತು ಬೆಂಬಲಿಗರ ಜೊತೆಗೆ ಚರ್ಚಿಸಿ ಈಶ್ವರಪ್ಪ ಈ ನಿರ್ಧಾರ ಪ್ರಕಟಿಸಿದ್ದಾರೆ. ಈಶ್ವರಪ್ಪ ಅವರು ರಾಜಕೀಯವಗಿ ನಿವೃತ್ತಿ ಘೋಷಿಸಿದ್ದರೂ, ಪಕ್ಷದ ಪ್ರಚಾರ ಕಾರ್ಯದಲ್ಲಿ ಸಕ್ರೀಯವಗಿ ಪಾಲ್ಗೊಳ್ಳುತ್ತಾರೆ ಎಂದರು. ಧಾರವಾಡ ಜಿಲ್ಲೆಯ ವ್ಯಾಪ್ತಿಯ ಹಿರಿಯ ನಾಯಕರು ನಿವೃತ್ತಿ ಘೋಷಿಸುತ್ತಾರೆಯೇ ಎಂಬ ಪ್ರಶ್ನೆಗೆ, ಎಲ್ಲವನ್ನೂ ಪಕ್ಷದ ಹಿರಿಯರ ತೀರ್ಮಾನ ಮಾಡ್ತಾರೆ ಎಂದರು.
ಲಕ್ಷ್ಮಣ ಸವದಿ ಕಾಂಗ್ರೆಸ್ ಹೋಗುವ ವಿಚಾರ ನನಗೆ ಗೊತ್ತಿಲ್ಲ ಎಂದ ಅವರು, ಯಾರಿಗೆ ಟಿಕೆಟ್ ಕೊಡಬೇಕು ಯಾರಿಗೆ ಕೊಡಬರದು ಎಂಬುದನ್ನು ಪಕ್ಷ ಅಂತಿಮಗೊಳಿಸುತ್ತದೆ ಎಂದರು.

Previous articleವಿಧಾನಸಭೆ ಚುನಾವಣೆಗೆ ʼಜೈ ಹನುಮಾನ್ ಸೇನೆʼ ಸಿದ್ಧ
Next articleಲಿಸ್ಟ್‌ನಿಂದ ಶೆಟ್ಟರ್‌ ಔಟ್!