ಈಡಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಿ: ಪ್ರಣವಾನಂದ ಸ್ವಾಮೀಜಿ

0
22

ಕೋಲಾರ: ರಾಜ್ಯದಲ್ಲಿ ಈಡಿಗ ಸಮುದಾಯ 70 ಲಕ್ಷ ಸಂಖ್ಯೆಯಲ್ಲಿದ್ದರೂ ಸರ್ಕಾರ ಸಮುದಾಯವನ್ನು ಕಡೆಗಣಿಸಿದೆ. 2ಎ ಮೀಸಲಾತಿಗಾಗಿ ದೊಡ್ಡ ಸಮಾಜ ಪ್ರತಿಭಟನೆ ನಡೆಸುತ್ತಿದೆ. ಅದರಿಂದ ನಮ್ಮ ಸಮಾಜಕ್ಕೆ ತೊಂದರೆಯಾಗಲಿದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಈಡಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ ಕೊಡಲೇಬೇಕು. ಈ ಬಗ್ಗೆ ಸರ್ಕಾರ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಮೀಸಲಾತಿಗಾಗಿ ಜ. 6 ರಂದು ಮಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 40 ದಿನಗಳ ಕಾಲ 658 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಸಮುದಾಯದ ಬೇಡಿಕೆ ಈಡೇರದೇ ಹೋದಲ್ಲಿ ಬುದ್ಧಿ ಕಲಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Previous articleಮಹದಾಯಿ ಯೋಜನೆ: ಡಬಲ್ ಎಂಜಿನ್ ಸರ್ಕಾರ ಧೋರಣೆ ಖಂಡಿಸಿ ಜನವರಿ 2 ರಂದು ಪ್ರತಿಭಟನಾ ರ್ಯಾಲಿ: ಎಚ್.ಕೆ. ಪಾಟೀಲ್
Next articleಆನೆಗೂ ಫುಟ್ಬಾಲ್‌ ಗುಂಗು..!