ಮಂಡ್ಯ: ಬಸರಾಳು ಸಮೀಪದ ದೊಡ್ಡಕೊತ್ತಗೆರೆಯಲ್ಲಿ ಈಜಲು ಹೋದ ಐವರು ಯುವತಿಯರು ನೀರು ಪಾಲಾದ ಘಟನೆ ನಡೆದಿದೆ. ಬೆಂಗಳೂರಿನ ನೀಲಸಂದ್ರ ಮೂಲದವರಾದ ಇವರು, ಸಂಬಂಧಿಕರ ಮನೆಗೆ ಬಂದಿದ್ದರು. ಆಗ ಈಜಲು ಕಾಲುವೆಗೆ ಧುಮುಕಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿ ಮೂವರ ಮೃತ ದೇಹ ಹೊರತೆಗೆದಿದ್ದಾರೆ. ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆದಿದ್ದು, ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.