ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ

0
11
Lunar-Eclipse

ನವೆಂಬರ್‌ 8 ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ ಜರುಗಲಿದೆ. ಚಂದ್ರ ಗ್ರಹಣವು ಕಾರ್ತಿಕ ಪೂರ್ಣಿಮೆಯ ದಿನದಂದೇ ಸಂಭವಿಸಲಿದೆ. ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಚಂದ್ರ ಗ್ರಹಣದ ಕಾಲವು ಭಾರತೀಯ ಕಾಲಮಾನ ನವೆಂಬರ್‌ 8 ರ ಮಧ್ಯಾಹ್ನ 1:32 ರಿಂದ ಪ್ರಾರಂಭವಾಗಿ ಸಂಜೆ 7: 27 ರವರೆಗೆ ನಡೆಯಲಿದೆ. ಈ ವಿದ್ಯಾಮಾನವು ಭಾರತದಲ್ಲಿ ನವೆಂಬರ್‌ 8ರ ಸಂಜೆ 5 ಗಂಟೆ 32 ನಿಮಿಷಕ್ಕೆ ಕಾಣಿಸಲಿದೆ. ಮತ್ತು ಸಂಜೆ 6 ಗಂಟೆ 18 ನಿಮಷಕ್ಕೆ ಮುಕ್ತಾಯಗೊಳ್ಳಲಿದೆ. ಈ ವರ್ಷದ ಕೊನೆಯ ಚಂದ್ರ ಗ್ರಹಣವು ಏಷ್ಯಾ, ಆಸ್ಟ್ರೇಲಿಯಾ, ಈಶಾನ್ಯ ಯುರೋಪ್‌, ಫೆಸಿಫಿಕ್‌ ಸಾಗರ, ಹಿಂದೂ ಮಹಾಸಾಗರ, ನಾರ್ತ್‌ ಅಮೇರಿಕಾ ಮತ್ತು ಸೌತ್‌ ಅಮೇರಿಕಾಗಳಲ್ಲಿ ಕಾಣಿಸುತ್ತದೆ. ಆದರೆ ಈ ಚಂದ್ರ ಗ್ರಹಣವು ನೈರುತ್ಯ ಯುರೋಪ್‌ ಮತ್ತು ಆಫ್ರಿಕಾ ಖಂಡಗಳಲ್ಲಿ ಕಾಣಿಸುವುದಿಲ್ಲ. ಭಾರತದಲ್ಲಿ 2022ರ ಕೊನೆಯ ಚಂದ್ರ ಗ್ರಹಣವು ಕೋಲ್ಕತ್ತಾ, ಪಾಟ್ನಾ, ರಾಂಚಿ ಮತ್ತು ಗೌಹಾಟಿ ಮುಂತಾದ ಸ್ಥಳಗಳಲ್ಲಿ ಗೋಚರಿಸಲಿದೆ.

Previous articléನಾದದ ನವನೀತ’ ಸಾಕ್ಷ್ಯ ಚಿತ್ರಕ್ಕೆ 68ನೇ ರಾಷ್ಟ್ರಪ್ರಶಸ್ತಿ
Next articleಶಿವಬಸವ ಮಹಾಸ್ವಾಮೀಜಿಗಳ ನಿಧನ