ವಿಜಯಪುರ: ಈ ಹಿಂದೆ ಪ್ರಾದೇಶಿಕ ಪಕ್ಷ ಕಟ್ಟಿದವರ ಸಾಲಿಗೆ ನನ್ನನ್ನು ಸೇರಿಸಬೇಡಿ. ಕೆಲವೊಬ್ಬರು ನನ್ನನ್ನು ಜೋಕರ್ ಎನ್ನುತ್ತಿದ್ದಾರೆ, ಆದರೆ ಇದೇ ಜೋಕರ್ ಮುಂದೆ ರಾಜ್ಯವನ್ನು ಆಳುವುದು ನೆನಪಿರಲಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಾಮಾನ್ಯ ಕಾರ್ಯರ್ತ, ನನಗೆ ರಾಜ್ಯದಾದ್ಯಂತ ಬೆಂಬಲಿಗರಿದ್ದಾರೆ. ಹಣದಿಂದ ಕಾರ್ಯಕರ್ತರನ್ನು ತಯಾರು ಮಾಡಲು ಆಗಲ್ಲ ಎಂದರು.
೨೦೧೫ ಪರಿಷತ್ ಚುನಾವಣೆಯಲ್ಲಿ ಯತ್ನಾಳ ಕಥೆ ಮುಗಿತು ಎಂದಿದ್ದರು. ಆದರೆ ಏನಾಯಿತು? ಚುನಾವಣೆಯಲ್ಲಿ ಗೆದ್ದು ಬಂದೆ. ಮುಂದೆಯೂ ಇದೇ ರೀತಿ ಎಂದರು.
ವಿಜಯೇಂದ್ರ ದುಬೈ, ಮಾರಿಷಸ್‌ನಲ್ಲಿ ಆಸ್ತಿ ಮಾಡಿದ್ದಾನೆ. ನಾನು ಆಸ್ತಿ ಮಾಡಿಲ್ಲ. ಜನರೇ ನನ್ನ ಆಸ್ತಿ ಎಂದು ಯತ್ನಾಳ ಎಂದರು.