ಇಷ್ಟೊಂದು ದಾರಿದ್ರ್ಯ ಬರಬಾರದಿತ್ತು, ಇದು ಕನ್ನಡಿಗರ ದುರಂತ

0
9

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ನೊಂದ ಜೀವಗಳ ಚಿಕಿತ್ಸೆಗೆ ಹಣ ಕೊಡುವುದಕ್ಕೆ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಮೇಶ್ವರಂ ಕೆಫೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿ ಈಗ ಅವರ ಕಿವಿ ಮೇಲೂ ಹೂವಿಟ್ಟಿದೆ ಕಾಂಗ್ರೆಸ್ ಸರ್ಕಾರ.

ವೈದೇಹಿ ಆಸ್ಪತ್ರೆಯಲ್ಲಿ ಆರು ಜನ ಗಾಯಾಳುಗಳು ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದರೂ ಇದುವರೆಗೂ ಯಾವುದೇ ಸರ್ಕಾರಿ ಪ್ರತಿನಿಧಿ, ಅಧಿಕಾರಿ ಹೋಗಿ ವೆಚ್ಚ ಭರಿಸುವ ಮಾತೂ ಆಡಿಲ್ಲ. ಓಲೈಕೆ ರಾಜಕಾರಣಕ್ಕಾಗಿ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿಕೊಳ್ಳಲು ₹10 ಸಾವಿರ ಕೋಟಿ ಸರ್ಕಾರಿ ಹಣವನ್ನು ದಾನ ಮಾಡುವ ಸಿದ್ದರಾಮಯ್ಯ ಅವರಿಗೆ ನೊಂದ ಜೀವಗಳ ಚಿಕಿತ್ಸೆಗೆ ಹಣ ಕೊಡುವುದಕ್ಕೆ ಆಗುವುದಿಲ್ಲ. ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಇಷ್ಟೊಂದು ದಾರಿದ್ರ್ಯ ಬರಬಾರದಿತ್ತು, ಇದು ಕನ್ನಡಿಗರ ದುರಂತ ಎಂದಿದ್ದಾರೆ.

Previous articleಪಣಂಬೂರು ಬೀಚ್‌ನಲ್ಲಿ ಮೂವರು ಯುವಕರು ನೀರುಪಾಲು
Next articleಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ