ಇದ್ದಕ್ಕಿದ್ದಂತೆ ಕುಸಿದುಬಿದ್ದ ಬರಗೂರು: ಚಿಕಿತ್ಸೆಯ ನಂತರ ಚೇತರಿಕೆ

0
17
baraguru

ದಾವಣಗೆರೆ: ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಹರಿಹರದಲ್ಲಿ ಭಾನುವಾರ ನಡೆದಿದೆ.
ಬಂಡಾಯ ವೇದಿಕೆಯಿಂದ ಹರಿಹರದ ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮದ ನಂತರ ಇದ್ದಕ್ಕಿದ್ದಂತೆ ನಿತ್ರಾಣಗೊಂಡಾಗ ತಕ್ಷಣ ಅವರನ್ನು ಹರಿಹರದ ಅಕ್ಷಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆಯ ತರುವಾಯ ಬರಗೂರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ತಾವೀಗ ಆರೋಗ್ಯವಾಗಿದ್ದೇನೆ. ಯಾರೂ ಆತಂಕಗೊಳ್ಳಬೇಕಿಲ್ಲ ಎಂದು ಮಾಧ್ಯಮಗಳ ಮುಂದೆ ಸ್ವತಃ ಅವರೆ ತಿಳಿಸಿದ್ದಾರೆ. ಚಿಕಿತ್ಸೆಯ ನಂತರ ಬರಗೂರು ಚೇತರಿಕೆ ಕಂಡಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಂಡು ಬೆಂಗಳೂರಿಗೆ ತೆರಳಿದ್ದಾರೆ.

Previous articleದೈವ ಒಲಿಸಿಕೊಳ್ಳಲು ನಾಲಿಗೆಗೆ ಕತ್ತರಿ
Next articleಮುಂದಿನ ಆಯವ್ಯಯದಲ್ಲಿ ವಿಕಲಚೇತನರಿಗೆ ಆದ್ಯತೆ: ಬೊಮ್ಮಾಯಿ