ಇದು ವಿಜಯಪುರ ಒಂದರ ಕಥೆಯಲ್ಲ…

0
22

ಅಕ್ಬರ್ ಜಹಾಂಗೀರ್ ಔರಂಗಝೇಬ್ ನಿಮಗೆ ಬಿಟ್ಟುಹೋಗಿರುವ ಆಸ್ತಿಯಾ? ಅಥವಾ ಜಿನ್ನಾ ನಿಮಗಾಗಿ ಭಾರತದಲ್ಲಿ ಬಿಟ್ಟುಹೋಗಿರುವ ಜಮಿನಾ?

ಮೈಸೂರು: ವಕ್ಫ್ ಅಸ್ತಿ ಅಂದರೇನು? ಎಲ್ಲಿಂದ ಬಂತು? ಸೌದಿ ಅರೇಬಿಯಾದ ಯಾವುದೊ ಮುಲ್ಲಾ, ಮೌಲ್ವಿ ಅಥವಾ ಇಮಾಮ್‌ನಿಂದ ನಿಮಗೆ ಬಳುವಳಿಯಾಗಿ ಬಂದಿದ್ದಾ? ಅಥವಾ ಅಕ್ಬರ್ ಜಹಾಂಗೀರ್ ಔರಂಗಝೇಬ್ ನಿಮಗೆ ಬಿಟ್ಟುಹೋಗಿರುವ ಆಸ್ತಿಯಾ? ಅಥವಾ ಜಿನ್ನಾ ನಿಮಗಾಗಿ ಭಾರತದಲ್ಲಿ ಬಿಟ್ಟುಹೋಗಿರುವ ಜಮಿನಾ? ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಇದು ವಿಜಯಪುರ ಒಂದರ ಕಥೆಯಲ್ಲ. ನಮ್ಮ ಹುಣಸೂರಿನ ಕಟ್ಟೆಮಳವಾಡಿಯ ಗಣೇಶ ದೇವಸ್ಥಾನದ 17 ಎಕರೆ ಜಮೀನೂ ವಕ್ಫ್ ಅಸ್ತಿ ಎಂದು ಕಬಳಿಸಲು ಬಂದಿದ್ದೀರಿ? ಚಿಕ್ಕಮಗಳೂರಿನ ಆರ್. ಜಿ. ರೋಡ್ನಲ್ಲಿರುವ ಕಮಲಮ್ಮನ 3 ಎಕರೆ ಜಮೀನು ಹೊಡೆದುಕೊಳ್ಳಲು ಹೈ ಕೋರ್ಟ್‌ಗೆ ಹೋಗಿದ್ದೀರಿ?, ಒಂದು ಲಕ್ಷಕ್ಕೂ ಅಧಿಕ ಎಕರೆ ಜಾಮೀನು ನಮ್ಮದೆಂದು ಪ್ರತಿಪಾದಿಸುತ್ತಿದ್ದೀರಲ್ಲಾ, ಇಷ್ಟೆಲ್ಲಾ ಜಾಮೀನು ಹೊಡೆದುಕೊಂಡು ಏನು ಮಾಡಿದ್ದೀರಿ? ಯಾವ ಬಡ ಮುಸಲ್ಮಾನನಿಗೆ ಉಳುಮೆ ಮಾಡಿಕೊಳ್ಳಲು ಕೊಟ್ಟಿದ್ದೀರಾ? ಅಥವಾ ನಮ್ಮ ದೇವಸ್ಥಾನಗಳಂತೆ ಯಾರಿಗಾದರೂ ಹಿಡಿ ಅನ್ನ ಹಾಕುತಿದ್ದೀರಾ? ಎಂದು ಪ್ರಶ್ನಸಿದ್ದಾರೆ. ಮಾನ್ಯ ಸಿದ್ದರಾಮಯ್ಯನವರೇ, ನಿಮಗೆ ಕಷ್ಟ ಬಂದಾಗ ಕೈಮುಗಿದಿದ್ದು ಚಾಮುಂಡಿ ತಾಯಿಗೆ ಮತ್ತು ಹಾಸನಂಬಗೆ ಹೊರತು ಅನ್ಯ ಧರ್ಮಿಯರ ದೇವರಿಗಲ್ಲ. ಇನ್ನಾದರೂ ಮುಸಲ್ಮಾನರ ಓಲೈಕೆ ಬಿಡಿ ಎಂದರು.

Previous articleದೇವಸ್ಥಾನ ಉತ್ಸವ ವೇಳೆ ಪಟಾಕಿ ದುರಂತ: ೧೫೦ಕ್ಕೂ ಹೆಚ್ಚು ಮಂದಿಗೆ ಗಾಯ
Next articleಯುವಕನಿಗೆ ವಿದ್ಯುತ್ ಶಾಕ್: ಆಸ್ಪತ್ರೆಗೆ ದಾಖಲು