ಆಸ್ಪತ್ರೆಯಿಂದ ಎಸ್ಕೇಪ್‌ ಆಗಿದ್ದ ರೌಡಿ ಬಂಧನ

0
22
ಐವರ ಬಂಧನ

ಚಿಕ್ಕಮಗಳೂರು: ನಗರದ ಜಿಲ್ಲಾ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ರೌಡಿ ಪೂರ್ಣೇಶ್‌ನನ್ನು ಬಾಳೆಹೊನ್ನೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಪೊಲೀಸರ ಕಣ್‌ತಪ್ಪಿಸಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ರಾತ್ರೋರಾತ್ರಿ ತಪ್ಪಿಸಿಕೊಂಡಿದ್ದ ಕುಖ್ಯಾತ ರೌಡಿ ಪೂರ್ಣೇಶ್‌ನನ್ನು ಮತ್ತೊಮ್ಮೆ ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ತನ್ನ ಸ್ವ ಗ್ರಾಮ ಖಾಂಡ್ಯದ ಮಾಗಲು ಬ್ರಿಡ್ಜ್ ಬಳಿ ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿ ಶೀಟರ್ ಪೂರ್ಣೇಶ್ ಪೊಲೀಸರ ಮೇಲೆ ಲಾಂಗ್ ಬೀಸುವ ವೇಳೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವೇಳೆ ತನ್ನ ಕಾಲಿನ ಗಾಯ ವಾಸಿಯಾಗಿಲ್ಲ ಎಂದು ನಟಿಸಿ ಕಾವಲಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಇವನ ಬಂಧನಕ್ಕೆ ಆರು ತಂಡ ರಚಿಸಲಾಗಿತ್ತು,
ಬಾಳೆಹೊನ್ನೂರು ಠಾಣೆ ಪಿಎಸ್.ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ಚಿಕ್ಕಮಗಳೂರು ನಗರ ಠಾಣೆಯಲ್ಲೂ ಎಸ್ಕೇಪ್ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿಗೆ ಕರೆತರುವ ಸಾಧ್ಯತೆ ಇದೆ.

Previous articleಜ್ಞಾನವಾಪಿ ವಿವಾದ: ಸುಪ್ರೀಂ ಮಹತ್ವದ ಆದೇಶ
Next articleಹುಬ್ಬಳ್ಳಿಯ ಶ್ರೀರಾಮನ ಧ್ವಜಕ್ಕೆ ಹೊರ ರಾಜ್ಯಗಳಿಂದ ಭಾರಿ ಬೇಡಿಕೆ