ಆಸ್ಪತ್ರೆಯಲ್ಲಿ ಯುವಕ ಸಾವು: ಬಜರಂಗದಳದ ಕಾರ್ಯಕರ್ತರ ಪ್ರತಿಭಟನೆ

0
12

ಮಂಗಳೂರು: ಮೂರು ದಿನಗಳಿಂದ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೂಪೇಶ್ ಬಂಟ್ವಾಳ ಭಾನುವಾರ ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದರು.
ಮೃತ ಯುವಕನ ಶವವನ್ನು ವೆನ್ಲಾಕ್ ಆಸ್ಪತ್ರೆ ಬಳಿ ಇಟ್ಟು ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು. ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ರೂಪೇಶ್ ಯಾನೆ ನಿತಿನ್ ಪೂಜಾರಿ(30) ಮೃತಪಟ್ಟ ಯುವಕ. ಹೊಟ್ಟೆ ನೋವು ಉಲ್ಬಣಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಖಾಸಗಿ ಬಸ್ ಚಾಲಕನಾಗಿ ದುಡಿಯುತ್ತಿದ್ದ ರೂಪೇಶ್ ಅವಿವಾಹಿತ. ಬಜರಂಗ ದಳ ಸಹಿತ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಆಗಿದ್ದರು.

Previous articleಹೀನಾಯ ಸೋಲು: ನಳಿನ್, ಡಿವಿ ಶ್ರದ್ಧಾಂಜಲಿ ಬ್ಯಾನರಿಗೆ ಚಪ್ಪಲಿ ಹಾರ
Next articleನನ್ನ ಜತೆಗೆ 135 ಜನ ಶಾಸಕರಿದ್ದಾರೆ