ಆಳ್ವಾಸ್ ವಿರಾಸತ್: ಗಮನ ಸೆಳೆದ ವಿದ್ಯಾರ್ಥಿನಿಯರ ಹುಲಿವೇಷ

0
25

ಮೂಡುಬಿದಿರೆ: ಆರು ದಿನಗಳ ಕಾಲ ಆಳ್ವಾಸ್‌ನ ನೇತೃತ್ವದಲ್ಲಿ ನಡೆಯಲಿರುವ 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಯ ಉತ್ಸವ ಆಳ್ವಾಸ್ ವಿರಾಸತ್-2024ರ ಸಾಂಸ್ಕೃತಿಕ ಮೆರವಣಿಗೆಯಲ್ಲಿ 146 ತಂಡಗಳು ಭಾಗವಹಿಸಿದ್ದು ಇದರಲ್ಲಿ ಇದೇ ಮೊದಲ ಬಾರಿಗೆ ಆಳ್ವಾಸ್ ವಿದ್ಯಾರ್ಥಿನಿಯರ ತಂಡದ ಹುಲಿವೇಷದ ಕುಣಿತವು ಗಮನ ಸೆಳೆಯಿತು.
ಮೊದಲ ಸಾಲಿನಲ್ಲಿ ಪ್ರತಿವರ್ಷದ ವಿರಾಸತ್‌ನಲ್ಲಿ ಕಂಡು ಬಂದಂತೆ ಶಂಖ ಊದುವ ಕಲಾವಿದರಿಗೆ ಆದ್ಯತೆ ನೀಡಲಾಗಿತ್ತು. ದಾಸಯ್ಯರು, ಕೊಂಬು, ರಣ ಕಹಳೆ, ಮೂರು ತಂಡಗಳ ಕಹಳೆ, ಕಾಲ ಭೈರವ, ಕೊರಗರ ಡೋಲು, ಸ್ಯಾಕ್ಸೋಫೋನ್, ಬ್ಲ್ಯಾಕ್ ಎನಿಮಲ್, ನಂದಿಧ್ವಜ, ಸುಗ್ಗಿ ಕುಣಿತ, ಶ್ರೀರಾಮ, ಪರಶುರಾಮ, ಘಟೋತ್ಕಜ, ಊರಿನ ಚೆಂಡೆ, ತಟ್ಟಿರಾಯ, ನಾದಸ್ವರ ತಂಡ, ಚೆಂಡೆಗಳು, ಪೂರ್ಣಕುಂಭ, ಲಂಗ ಧಾವಣಿ, ಅಪ್ಸರೆಯರು, ಯಕ್ಷಗಾನ ವೇಷ, ಗೂಳಿ-ಕಟ್ಟಪ್ಪ, ಗೊರವರ ಕುಣಿತ, ಕಿಂದರಿ ಜೋಗಿ.
ಸೋಮನ ಕುಣಿತ, ಆಂಜನೇಯ-ವಾನರ ಸೇನೆ, ಮಹಾಕಾಳೀಶ್ವರ, ಶಿವ, ಮರಗಾಲು, ತಮಟೆ ವಾದನ, ಎರಡು ಆಂಜನೇಯ ತಂಡ, ಮಹಿಳಾ ಪಟ ಕುಣಿತ, ಕಂಬಳ, ಹುಲಿ ವೇಷದ ತಂಡಗಳು, ತೆಯ್ಯಂ, ಚಿಟ್ಟೆಮೇಳ, ಶಿವ-ಅಘೋರಿಗಳು, ಕಿಂಗ್ ಕೋಂಗ್, ಶಿಲ್ಪಾ ಗೊಂಬೆ ಬಳಗ, ಆಳ್ವಾಸ್ ಗೊಂಬೆ ಬಳಗ, ಚೈನೀಸ್ ಡ್ರಾಗನ್, ಚೈನಾ ಲಯನ್,ಬ್ಯಾಂಡ್ ಸೆಟ್, ಆಳ್ವಾಸ್ ಕಾರ್ಟೂನ್ಸ್, ಸ್ನೇಹ ಗೊಂಬೆ ಬಳಗ, ಚಿಲಿಪಿಲಿ ಗೊಂಬೆ ಬಳಗ, ವಂಶಿಕಾ ಗೊಂಬೆ ಬಳಗ, ಬಿದಿರೆ ಮೂಡುಬಿದಿರೆ, ಶೆಟ್ಟಿ ಬೊಂಬೆಗಳು.
ಶಾರದಾ ಆಟ್ಸ್ ೯ ಚೆಂಡೆ, ಟಾಲ್ ಮ್ಯಾನ್, ಹಿಮ ಕರಡಿ ಗೊಂಬೆ, ಚಿರತೆ ಗೊಂಬೆ, ಏರ್ ಬಲೂನ್, ಕರಡಿ ಗೊಂಬೆ, ಗಜ ಹುಲಿ, ಕಾಟಿ, ಗಣಪತಿ, ನರಸಿಂಹ, ಹುಲಿ, ಬೋಳಾರ್ & ಟೀಮ್, ವಾರ್ ಕ್ರಾಫ್ಟ್, ಚಿಟ್ಟೆ, ಸಿಂಗಳೀಕ, ಗಣಪತಿ, ಜೋಡಿ ಸಿಂಹ, ಜೋಡಿ ಜಿಂಕೆ, ಚಿತ್ರದುರ್ಗ ಬ್ಯಾಂಡ್, ಪೂಜಾ ಕುಣಿತಗಳು, ಬೆಂಡರ ಕುಣಿತ, ಮಹಿಳೆಯರ ಕೋಲಾಟ, ಹಗಲುವೇಷ, ಕೋಳಿಗಳು, ನಾಸಿಕ್ ಬ್ಯಾಂಡ್, ಮೀನುಗಳು, ಕಾರ್ಟೂನ್ಸ್, ಪುರವಂತಿಕೆ, ವೀರಭದ್ರನ ಕುಣಿತ, ಜಗ್ಗಳಿಕೆ ಮೇಳ, ಪಟದ ಕುಣಿತ, ಕೊಂಚಾಡಿ ಚೆಂಡೆ, ಶ್ರೀಲಂಕ ಕಲಾವಿದರು ಮತ್ತು ಮುಖವಾಡ, ವೀರಗಾಸೆ, ಕರಡಿ ಮಜಲು, ಕಂಸಾಳೆ.
ಪುರುಷರ ನಗಾರಿ, ಮಹಿಳೆಯರ ನಗಾರಿ, ದಫ್, ತಿರುವಾದಿರ, ಡೊಳ್ಳು ಕುಣಿತ, ಪಂಚ ವಾದ್ಯ, ಏಂಜಲ್ಸ್, ಎಲ್ವ್ಸ್, ಸಂತಾಕ್ಲಾಸ, ನಾಸಿಕ್ ಬ್ಯಾಂಡ್, ಶಿಂಗಾರಿ ಮೇಳ, ಅರ್ಧ ನಾರೀಶ್ವರ, ಪೂಕಾವಡಿ, ಕೇರಳದ ಚಿಟ್ಟೆ, ಕಥಕ್ಕಳಿ ವೇಷ, ಆರೆನಾ ವೇಷ, ಕಮಲ ವೇಷ ಹಾಗೂ ತಮಿಳುನಾಡಿನ ನೃತ್ಯ.
ಶೃಂಗಾರಿಮೇಳ, ಕೇರಳದ ದೇವರ ವೇಷಗಳು, ಕೇರಳದ ಡಿಜಿಟಲ್ ವೇಷ, ತೆಯ್ಯಂ ಉಡುಪಿ, ಬ್ಲೂ ಬ್ರಾಸ್ ಬ್ಯಾಂಡ್, ಉಡುಪಿಯ ಕೋಳಿ ತಂಡ ಮತ್ತು ಮೀನುಗಳು, ಕಾಮಿಡಿಯನ್ಸ್, ಗರುಡ, ಡೊಳ್ಳು ಕುಣಿತ, ಎನ್ ಸಿಸಿ ನೇವಲ್, ಆರ್ಮಿ, ಏರ್ ಪೊರ್ಸ್, ಆಳ್ವಾಸ್ ಬ್ಯಾಂಡ್ ಸೆಟ್, ಸ್ಕೌಟ್ಸ್ &ಗೈಡ್ಸ್, ರೋವರ್ಸ್ ರೇಂಜರ್ಸ್ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ 2024ರ ಆಳ್ವಾಸ್ ವಿರಾಸತ್ ಗೆ ಮೆರುಗು ನೀಡಿದವು.

Previous articleಸರ್ಕಾರದ ಯಾವುದೇ ಬೆದರಿಕೆಗೆ ಮಣಿಯಲ್ಲ, ಹೋರಾಟ ಮುಂದುವರಿಯುತ್ತದೆ
Next articleವಿಶ್ವವನ್ನೇ ಹೃದಯದಲ್ಲಿ ತುಂಬುವ ವಿಶಾಲ ದೃಷ್ಟಿ ‘ವಿರಾಸತ್’: ಹೆಗ್ಗಡೆ