ಆರೋಪ ಮಾಡಿದ ಮೇಲೆ ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು: ಸಚಿವ ಮುನಿರತ್ನ

0
15

ಕೋಲಾರ: ಆರೋಪ ಮಾಡಿದ ಮೇಲೆ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಕಷ್ಟವಾಗುತ್ತೆ. ದಾಖಲೆ ಕೊಡಲಿಲ್ಲವೆಂದರೆ ಎರಡು ವರ್ಷ ಶಿಕ್ಷೆ ಆಗುತ್ತದೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಖಲೆ ನೀಡಬೇಕು. ಆದರೆ ಒದಗಿಸಿಲ್ಲ. ಹೀಗಾಗಿ ನ್ಯಾಯಾಲಯದಿಂದ ಸಮನ್ಸ್ ಬಂತು, ಸಮನ್ಸ್ ಬಂದು ದಾಖಲೆ ಕೊಡದಿದ್ದರಿಂದ ವಾರೆಂಟ್ ಬಂತು. ಅದನ್ನು ಅರ್ಥ ಮಾಡಿಕೊಳ್ಳಬೇಕು. ಆರೋಪ ಮಾಡಿದ ಮೇಲೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಇರಬೇಕು ಎಂದರು.

Previous articleಪ.ಜಾತಿ, ಪ.ಪಂಗಡ ಕಲ್ಯಾಣಕ್ಕಾಗಿ ಕೇವಲ 21 ಸಾವಿರ ಕೋಟಿ ಘೋಷಣೆ
Next articleಕಂಬಳ ಗಾಮೀಣ ಕ್ರೀಡೆ ಮಾತ್ರವಲ್ಲ, ಗ್ರಾಮೀಣ ಬದುಕಿಗೆ ಶಕ್ತಿ ತುಂಬುವ ಕಲೆ: ಸಿಎಂ ಬಸವರಾಜ ಬೊಮ್ಮಾಯಿ