ಆರು ತಿಂಗಳಲ್ಲಿ ಬಿಜೆಪಿಯೇ ಉಳಿಯಲ್ಲ

0
12

ಕಲಬುರಗಿ: `ರಾಜ್ಯದಲ್ಲಿ ಇನ್ನು ಆರು ತಿಂಗಳಲ್ಲಿ ಬಿಜೆಪಿಯೇ ಉಳಿಯಲ್ಲ. ಬೇಕಾದ್ರೆ ನಾನು ಗ್ಯಾರಂಟಿ ಕೊಡುವೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು. ಸೋಮವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು, `ಇನ್ನೂ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಪತನವಾಗುತ್ತದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಕ್ಕೆ ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದರು. `ಅವರಿಗಷ್ಟೇ ರಾಜಕೀಯ ಮಾಡಲು ಬರುತ್ತದಾ, ನಮಗೂ ಬರುತ್ತದೆ, ನಾವು ಸುಮ್ಮನೆ 140 ವರ್ಷಗಳಿಂದ ಪಕ್ಷ ನಡೆಸಿಕೊಂಡು ಬರುತ್ತಿದ್ದೇವಾ?, ಅದ್ಹೇಗೆ ಸರ್ಕಾರ ಬೀಳಿಸ್ತಾರಂತೆ, ರಾಷ್ಟ್ರಪತಿ ಆಡಳಿತ ತರ್ತಾರಾ?, ತಾಕತ್ತಿದ್ದರೆ ಸರ್ಕಾರ ಮಾಡಲಿ ಎಂದು ನಾನು ಸವಾಲು ಹಾಕುತ್ತೇನೆ’ ಎಂದರು. ಬಿಜೆಪಿಯಲ್ಲೇ ಅತೃಪ್ತಿ, ಅಸಮಾಧಾನ, ಭಿನ್ನಮತ ಹೆಚ್ಚಿದೆ. ಎಷ್ಟು ಜನ ಅಸಮಾಧಾನಗೊಂಡಿದ್ದಾರೆಂಬುದು ನನಗೆ ಗೊತ್ತಿದೆ, ಯಾರ್ಯಾರು ಹೊರಬರುತ್ತಾರೆ, ಯಾರು ಅಲ್ಲಿ ಉಳಿದುಕೊಳ್ಳುತ್ತಾರೆ ಕಾದುನೋಡಿ ಹೇಳಿದರು. `ಪ್ರಧಾನ ಮಂತ್ರಿಗಳು ಎಲ್ಲೆಲ್ಲಿ ಜನ ತಿರಸ್ಕರಿಸುತ್ತಾರೋ ಅಲ್ಲಿ ಆಪರೇಷನ್ ಕಮಲ ಮಾಡುವ ಪದ್ಧತಿ ಅಳವಡಿಸಿಕೊಂಡಿದೆ. ಈ ಹಿಂದೆ ಕರ್ನಾಟಕದಲ್ಲೂ ಕಮಲ ಮಾಡಿ ಯಶಸ್ವಿಯಾಗಿದ್ದಾರೆ. ಹಾಗೆ ಅಧಿಕಾರಕ್ಕೆ ಬಂದಿದ್ದೇನೋ ನಿಜ, ಆದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಹುಳುಕುಗಳನ್ನು ಹುಡುಕಲು ಶ್ರಮಿಸಲು ಬದಲಾಗಿ ತಮ್ಮ ಪಕ್ಷದ ಏಳಿಗೆಗಾಗಿ ಪ್ರಯತ್ನಿಸಬೇಕಿತ್ತು ಎಂದು ಪ್ರಿಯಾಂಕ್ ಟಾಂಗ್ ಕೊಟ್ಟರು. ರಾಜ್ಯ ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲವಿಲ್ಲ. ಕನ್ನಡಿಗರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾನತೆ ಕೊಡಿಸಲು ಶ್ರಮಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲವಿಲ್ಲ. ಕನ್ನಡಿಗರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾನತೆ ಕೊಡಿಸಲು ಶ್ರಮಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸುಭದ್ರವಾಗಿದೆ. ಯಾವುದೇ ಗೊಂದಲವಿಲ್ಲ. ಕನ್ನಡಿಗರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾನತೆ ಕೊಡಿಸಲು ಶ್ರಮಿಸುತ್ತಿದ್ದಾರೆ.

Previous articleಯುವ ಕಲಾವಿದ ಆತ್ಮಹತ್ಯೆ
Next articleಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರೇ ಅಡ್ಡಿ