Home Advertisement
Home ತಾಜಾ ಸುದ್ದಿ ಆಯನೂರು ಮಂಜುನಾಥ್ ಜೆಡಿಎಸ್​ನಿಂದ ಸ್ಪರ್ಧೆ!

ಆಯನೂರು ಮಂಜುನಾಥ್ ಜೆಡಿಎಸ್​ನಿಂದ ಸ್ಪರ್ಧೆ!

0
149
ಆಯನೂರು ಮಂಜುನಾಥ್‌

ಬೆಂಗಳೂರು: ಆಯನೂರು ಮಂಜುನಾಥ್​ ಅವರು ಜೆಡಿಎಸ್​ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಯನೂರು ಬಿಜೆಪಿಯಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಜೆಡಿಎಸ್​ ಪಕ್ಷದಡಿ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಕಳೆದ 6-7 ತಿಂಗಳಿನಿಂದಲೇ ಮಾತುಕತೆಗಳು ನಡೆದಿದ್ದವು. ನಟ ಸುದೀಪ್ ಯಾರ ಪರವಾದರೂ ಪ್ರಚಾರ ಮಾಡಬಹುದು. ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೆಲವು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತಾರೆ. ನಾಳೆ ಹಾಸನದಲ್ಲಿ ನಾನು ಸ್ವರೂಪ್ ಪ್ರಕಾಶ್ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.
ಆಯನೂರು ಮಂಜುನಾಥ್​ ಚಿತ್ರದುರ್ಗದಲ್ಲಿ ಇಂದು ಮಧ್ಯಾಹ್ನ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಹೆಚ್ ​ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಇಂದೇ ಪಕ್ಷ ಸೇರಲಿದ್ದಾರೆ. ಪಕ್ಷ ಸೇರ್ಪಡೆ ಬಳಿಕ ಅವರಿಗೆ ಕುಮಾರಸ್ವಾಮಿ ಅವರು ಅಲ್ಲೇ ಬಿ ಫಾರಂ ನೀಡಲಾಗುತ್ತದೆ. ಶಿವಮೊಗ್ಗ ನಗರದಿಂದ ಆಯನೂರು ಮಂಜುನಾಥ್ ಜೆಡಿಎಸ್​ನಿಂದ ಕಣಕ್ಕಿಳಿಯುವುದು ಎಂದು ತಿಳಿದುಬಂದಿದೆ.